Read - < 1 minute
ನವದೆಹಲಿ, ಸೆ.3: ಜಿಯೋ ರಿಲಾಯನ್ಸ್ ಭಾರೀ ಆಫರ್ ನಿಂದ ಬೆದರಿರುವ ಇತರೆ ಟೆಲಿಕಾಂ ಕಂಪನಿಗಳು ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ದಿನಕ್ಕೊಂದು ಆಫರ್ ನೀಡುತ್ತಿದೆ.
ಬಿಎಸ್ ಎನ್ ಎಲ್ ಕೂಡ ಇದಕ್ಕೆ ಹೊರತಾಗಿಲ್ಲ. ಇದೀಗ ಗ್ರಾಹಕರನ್ನು ಸೆಳೆಯಲು ಬಿಎಸ್ ಎನ್ ಎಲ್ ಕೂಡ ಭರ್ಜರಿ ಆಫರ್ ನೀಡಿದೆ.
ಕೇವಲ 249 ರೂ ಗೆ ಅನಿಯಮಿತ ಡೇಟಾ ಸೌಲಭ್ಯ ನೀಡುವುದಾಗಿ ಘೋಷಿಸಿದೆ. ಸೆ.9 ರಿಂದ ಇದು ಜಾರಿಯಾಗಲಿದ್ದು, 2 ಎಂಬಿಪಿಎಸ್ ಸ್ಪೀಡ್ ಇರಲಿದೆ.
ಗ್ರಾಹಕರು 249 ಡೇಟಾ ಪ್ಲಾನ್ ನನ್ನು ಒಂದು ತಿಂಗಳ ಉಪಯೋಗಿಸಿದ ಬಳಿಕ 300 ಜಿಬಿ ಡೇಟಾ ಬಳಸುವ ಗ್ರಾಹಕರಿಗೆ ಪ್ರತಿ ಡೇಟಾ ಗೆ 1 ರೂ ಗಿಂತಲೂ ಕಡಿಮೆ ಇರಲಿದೆ.
Discussion about this post