Read - 2 minutes
ಆತ ಹುತಾತ್ಮನಾದ 85 ವರ್ಷದ ನಂತರವೂ ಆತನ ಹೆಸರು ಕೇಳಿದರೆ ಇಡಿಯ ಯುವ ಸಮೂಹ ರೋಮಾಂಚನಗೊಳ್ಳುವುದೋ, ಯಾರ ಹೆಸರು ಕೇಳಿದ ತಕ್ಷಣ ಬ್ರಿಟೀಷ್ ಪಡೆ ನಡುಗುತ್ತಿತ್ತೋ, ಯಾರ ಹೆಸರು ನಮಗೆ ಮುಂದೆ ಮುಳುವಾಗುತ್ತದೋ ಎಂದು ಹಿತಶತ್ರುಗಳು ಸಂಚು ರೂಪಿಸಿದರೋ, ಯಾರ ವ್ಯಕ್ತಿತ್ವ ನಮ್ಮನ್ನೇ ಹೊರಗಟ್ಟುತ್ತದೆ ಎಂದು ಆ ವ್ಯಕ್ತಿಯನ್ನು ನೇಣಿಗೇರಿಸಿ ಅನ್ಯಾಯ ಮಾಡಿತೋ ಅಂತಹ ವ್ಯಕ್ತಿಯ ಜನ್ಮದಿನ ಇಂದು. ಅದೇ ಭಗತ್ ಸಿಂಗ್…
ಕೇವಲ 23 ವರ್ಷ ಆತ ಬದುಕಿದ್ದರೂ ಇಡೀ ಪ್ರಪಂ ಚವೇ ತಿರುಗಿ ನೋಡುವಂತೆ ಸಾಧನೆ ಮಾಡಿದ, ಇಂದಿಗೂ ದೇಶದ ಯುವಸಮೂಹದಲ್ಲಿ ದೇಶಭಕ್ತಿ ಯನ್ನು ಜಾಗೃತಿಯನ್ನು ಉಳಿಸಿ ಹೋದ ಆತನನ್ನು ಕಂಡರೆ ಬ್ರಿಟೀಷ್ ಪಡೆಯೇ ಹೆದರುತ್ತಿತ್ತು ಎಂದರೆ, ಆ ವ್ಯಕ್ತಿಯ ವ್ಯಕ್ತಿತ್ವದ ತಾಕತ್ತು ಇನ್ನೆಂತಹುದಿತ್ತು ಎಂಬುದು ತಿಳಿಯುತ್ತದೆ.
ಆದರೆ, ಆತನನ್ನು ಬದುಕಿಸಿಕೊಳ್ಳುವ ಸಾಧ್ಯತೆಗಳಿ ದ್ದರೂ, ದೇಶದ ಒಳಗಿದ್ದ ಸ್ವಹಿತಾಸಕ್ತಿಯ ನಾಯ ಕರು(?) ಮೌನವಾಗಿದ್ದುಕೊಂಡು ತಮ್ಮ ದಾರಿಯನ್ನು ಸುಲಲಿತ ಮಾಡಿಕೊಂಡರು. ಆದರೆ, ಭಗತ್ ಕಾಲ ವಾಗಿ ೮೫ ವರ್ಷ ಸಂದಿದೆ. ಆದರೆ, ಆತನ ಸಾಧನೆಗೆ ತಕ್ಕಂತಹ ಗೌರವವನ್ನು 60 ವರ್ಷ ಆಳ್ವಿಕೆ ಮಾಡಿದ ಸರ್ಕಾರ ನೀಡಲಿಲ್ಲ ಎನ್ನುವುದು ದುರಂತ.
ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಹಾಗೂ ಪಾಲ್ಗೊಂಡಿದ್ದು ಎಂಬು ಬಿಂಬಿಸಿಕೊಂಡ ಹಲವು ವ್ಯಕ್ತಿಗಳನ್ನು ರಾಷ್ಟ್ರ ನಾಯಕರನ್ನಾಗಿ ಘೋಷಿಸಲಾ ಯಿತು. ಆದರೆ, ತನ್ನ ಸಾವನ್ನು ಧೈರ್ಯ ಹಾಗೂ ಕೆಚ್ಚೆದೆ ಯಿಂದ ಬರಮಾಡಿಕೊಂಡ ಭಗತ್, ಕೊನೆ ಗಳಿಗೆ ಯಲ್ಲಿ ‘ಮೊದಲು ನಿಮ್ಮ ವೈಯುಕ್ತಿಕತೆಯನ್ನು ನುಚ್ಚುನೂರು ಮಾಡಿ, ವೈಯುಕ್ತಿಕ ಸುಖದ ಕನಸನ್ನು ಭಗ್ನಗೊಳಿಸಿ, ನಂತರ ಕೆಲಸ ಮಾಡಲು ತೊಡಗಿ. ನೀವು ಒಂದೊಂದೇ ಅಂಗುಲ ಮುಂದಕ್ಕೆ ಸಾಗಬೇಕು. ಅದಕ್ಕೆ ಧೈರ್ಯ ಬೇಕು; ದೃಡ ನಿರ್ಧಾರ ಬೇಕು; ನಿರಂತರ ಪರಿಶ್ರಮ ಬೇಕು. ಯಾವ ಕಷ್ಟ ಕಾರ್ಪಣ್ಯಗಳೂ ನಿರಾಶೆಗೊಳಿಸುವುದಿಲ್ಲ. ಯಾವ ವೈಫಲ್ಯಗಳೂ, ನಿಮ್ಮನ್ನು ಕಂಗೆಡಿಸುವುದಿಲ್ಲ. ತ್ಯಾಗ ಮತ್ತು ನರಳಾಟಗಳ ಅಗ್ನಿದಿವ್ಯವನ್ನು ಹಾದು ನೀವು ವಿಜಯಶಾಲಿಗಳಾ ಗುತ್ತೀರಿ. ಈ ವೈಯುಕ್ತಿಕ ಗೆಲುವುಗಳು ಕ್ರಾಂತಿಯ ಬಹುದೊಡ್ಡ ಆಸ್ತಿ’ ಎಂದು ಕರೆ ನೀಡಿದ ಈ ಶಕ್ತಿಯಾದ ವ್ಯಕ್ತಿಯನ್ನು ರಾಷ್ಟ್ರ ನಾಯಕ ಎಂದು ಘೋಷಿಸದೇ ಇದ್ದುದು ನಿಜಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಯ ಲೋಪ ಎಂದು ವಿಷಾದಿದಂದಲೇ ಹೇಳಬೇಕು.
ಭಗತ್ ಸಿಂಗ್ ಜೈಲಿನಲ್ಲಿ ಕಳೆದ ಕೊನೆಯ ದಿನಗಳಂದು ಅವರ ತಾಯಿಯ ದಿಟ್ಟತನದ ನುಡಿಗಳು ನಿಜಕ್ಕೂ ಆಪ್ಯಾಯಮಾನವಾದುದು. ಆ ತಾಯಿ ತನ್ನ ಮಗನಿಗೆ ಹೇಳಿದ್ದು: ನಿನ್ನ ನಿಲುಮೆಯನ್ನು ಎಂದಿಗೂ ಬದಲಿಸಬೇಡ. ಪ್ರಪಂಚವೇ ಮರೆಯಲಾಗದ ಸಾವು ಎಂದಿಗೂ ಅತ್ಯುತ್ತಮವಾದದ್ದು. ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆಯನ್ನು ಕೊನೆಯವರೆಗೂ ಕೂಗುತ್ತಿರು. ಯಾವ ತಾಯಿಗೂ ಲಭಿಸದ ಹೆಮ್ಮೆ ನನಗುಂಟಾಗಿದೆ ಎಂದು. ಇದನ್ನು ಓದಿದಾಗ ಅನಿಸುವುದು ಭಗತ್‌ರನ್ನು ಕಂಡ ನಾಡು ಮಾತ್ರವಲ್ಲ, ಅಂತಹ ಧೀರ ಮಾತೆಯನ್ನು ಪಡೆದ ಭಾರತಾಂಬೆಯೂ ಸಹ ಧನ್ಯಳು ಎಂದು.
ಕೋಟ್ಯಂತರ ಭಾರತೀಯ ಯುವಕರಲ್ಲಿ ಇಂದಿಗೂ ದೇಶಭಕ್ತಿಯ ಉದ್ದೀಪನವನ್ನು ಜಾಗೃತ ಗೊಳಿಸಿರುವ ಭಗತ್ ಎಂದಿಗೂ ರಾಷ್ಟ್ರ ನಾಯಕರೇ. ಅದನ್ನು ಜನಮಾನಸದಿಂದ ಅಳಿಸಲು ಎಂದಿಗೂ ಸಾಧ್ಯವಿಲ್ಲ ಎಂಬುದು ಸತ್ಯ.
ಈಗ ದೇಶಪ್ರೇಮಿಯಾದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ಥಿತ್ವದಲ್ಲಿದೆ. ಅನ್ಯಾಯ ಹಾಗೂ ಕುತಂತ್ರಗಳಿಂದ ತೆರೆಮರೆಗೆ ಸರಿಯಲ್ಪಟ್ಟ ನಿಜವಾದ ರಾಷ್ಟ್ರ ನಾಯಕರಿಗೆ ಮನ್ನಣೆ ದೊರೆಯುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ದೇಶಪ್ರೇಮಿ ಕ್ರಾಂತಿಕಾರಿ ಯುವಕರ ಹೆಸರಿಗೆ ಅರ್ಥ ಬರುವ ಭರವಸೆಗಳು ಮೂಡಿವೆ. ಆದರೆ, ಇದು ಕೇವಲ ಮಾತಿನಲ್ಲಿರಬಾರದು.
ಒಂದು ಕುಟುಂಬಕ್ಕೆ ಸೇರಿದ ನಕಲಿ ಗಾಂಧಿ ಕುಟುಂಬದ ವ್ಯಕ್ತಿಗಳ ಹೆಸರಿನಲ್ಲಿ ಸಾವಿರಕ್ಕೂ ಅಧಿಕ ಯೋಜನೆಗಳ ಜಾರಿಗೊಳ್ಳುತ್ತವೆ ಎಂದರೆ, ದೇಶಕ್ಕಾಗಿ ಹೋರಾಡಿ 23ನೆಯ ವಯಸ್ಸಿಗೇ ಪ್ರಾಣಾರ್ಪಣೆ ಮಾಡಿದ ಧೀರ ಭಾರತ ಮಾತೆಯ ಪುತ್ರ ಭಗತ್‌ಸಿಂಗ್ ಹೆಸರಿನಲ್ಲೇಕೆ ಯುವಕರನ್ನು ಪ್ರೇರೇಪಿಸುವ ಯೋಜನೆಗಳು ಜಾರಿಯಾಗಬಾರದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೂಡಲೇ ಚಿಂತಿಸಿ ಕಾರ್ಯಪ್ರವೃತ್ತರಾಗಬೇಕಿದೆ.
ಮಾತ್ರವಲ್ಲ, ಭಗತ್ ಹೆಸರು ಭಾರತದ ಚರಿತ್ರೆಯ ಪುಟದಲ್ಲಿ ಚಿರಸ್ಥಾಯಿಯಾಗಿ ಉಳಿದು, ಅಗಣಿತ ತಾರಾಬಳಗದ ಮಿನುಗುವ ಚಂದಿರರನ್ನಾಗಿಸಬೇಕಿದೆ.
Discussion about this post