ನಂಜನಗೂಡು, ಆ.28- ಕೇಂದ್ರ ಸಕರ್ಾರ ಮನಸ್ಸು ಮಾಡಿದರೆ ಮಹದಾಯಿ ನದಿ ತಿರುವು ಯೋಜನೆ ವಿವಾದವನ್ನು ಹತ್ತು ನಿಮಿಷಗಳಲ್ಲಿ ಬಗೆಹರಿಸಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುತ್ತೂರಿನಲ್ಲಿ ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಉತ್ತರ ಕನರ್ಾಟಕದ ರೈತರು ಶಾಶ್ವತ ನೀರಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಸಕರ್ಾರ ರೈತರ ಸಂಕಷ್ಟ ಅರಿತು ಮಹದಾಯಿ ನದಿ ತಿರುವು ಯೋಜನೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ನಿನ್ನೆ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೇಕರ್ ಮಾತನಾಡಿ, 2020ರಷ್ಟರಲ್ಲಿ ರಾಜ್ಯದ ನೀರಿನ ಸಮಸ್ಯೆಗಳು ಬಗೆಹರಿಯಲಿವೆ ಎಂದು ಹೇಳಿದ್ದಾರೆ.ಇದು ಸ್ವಾಗತಾರ್ಹ.ನೀರಿನ ಸಮಸ್ಯೆ ಬಗೆಹರಿಸಿ ರೈತರ ಸಂಕಷ್ಟ ಬಗೆಹರಿಸಿದರೆ ನಾವೆಲ್ಲ ಚಿರಋಣಿಗಳಾಗಿರುತ್ತೇವೆ ಎಂದು ಹೇಳಿದರು.
ಪ್ರಕೃತಿ ವಿಕೋಪಗಳಿಂದಾಗಿ ನಮ್ಮ ರಾಜ್ಯದಲ್ಲಿ ಅತ್ಯಂತ ಕ್ಲಿಷ್ಟ ದಿನಗಳು ಎದುರಾಗಿವೆ. ಜಲಾಶಯಗಳು ಬರಿದಾಗಿವೆ. ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.ಕೇಂದ್ರ ಸಕರ್ಾರ ಇದನ್ನು ಗಮನಿಸಬೇಕು ಎಂದರು.
ಸುತ್ತೂರು ಜಗದ್ಗುರುಗಳು ದೇಶ-ವಿದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಮುಂಚೂಣಿಯಲ್ಲಿದ್ದಾರೆ.ಸಕರ್ಾರ ಕೊಡಲಾಗದ ಕೆಲಸವನ್ನು ಸುತ್ತೂರು ಶ್ರೀಕ್ಷೇತ್ರ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಅತ್ಯಾಚಾರಕ್ಕೊಳಗಾದ ಬಾಲಕಿ ಮಗುವಿಗೆ ಜನ್ಮ ನೀಡಿ ತಂದೆ-ತಾಯಿಗಳ ಆರೈಕೆಯೂ ಇಲ್ಲದೆ ಜೈಲು ಪಾಲಾಗಿದ್ದಾಳೆ.ಇದಕ್ಕೆ ಕಾರಣನಾದ ಹುಡುಗ ರಿಮ್ಯಾಂಡ್ ಹೋಮ್ನಲ್ಲಿದ್ದಾನೆ. ನಾನು ಇಬ್ಬರ ಮನೆಯವರನ್ನೂ ಕರೆಸಿ ಮಾತನಾಡಿದ್ದೇನೆ. ಇದು ನಿಜಕ್ಕೂ ಅತ್ಯಂತ ಸೂಕ್ಷ್ಮ ವಿಚಾರ. ಸಕರ್ಾರ ಇದರ ಬಗ್ಗೆ ಗಮನ ಹರಿಸಬೇಕು ಎಂದು ವೇದಿಕೆಯಲ್ಲಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.
ಸಮಾಜದ ಬದಲಾವಣೆಗೆ ಗುರುಪೀಠಗಳು ಶ್ರಮಿಸುತ್ತಿವೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಸಮಾಜದ ಬದಲಾವಣೆಗೆ ಗುರುಪೀಠಗಳು ಶ್ರಮಿಸುತ್ತಿವೆ. ಸಕರ್ಾರಗಳು ಮಾಡದ ಕೆಲಸಗಳನ್ನು ಮಠಾಧೀಶರು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಧುನಿಕ ಜಗತ್ತಿಗೆ ಸತ್ಪ್ರಜೆಗಳನ್ನು ನೀಡುವ ಕೆಲಸವನ್ನು ಸುತ್ತೂರು ಕ್ಷೇತ್ರ ಮಾಡುತ್ತಿದೆ.ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಪಡೆದವರು ಸತ್ಪ್ರಜೆಗಳಾಗಿ ಸಮಾಜ ಸೇವೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ನನಗೆ ಶಿಕ್ಷಣ ಕ್ಷೇತ್ರ ಬಹಳ ಪ್ರಿಯವಾದ ಕ್ಷೇತ್ರ.ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದ ಸಾಧನೆ ಕಡಿಮೆ ಇದೆ.ಇದು ಇನ್ನೂ ಉತ್ತಮವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾಜರ್ುನ ಖಗರ್ೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಮತ್ತಿತರರು ಪಾಲ್ಗೊಂಡಿದ್ದರು.
Discussion about this post