Read - < 1 minute
ಭಾರತೀಯ ಸೇನೆ ಪಿಒಕೆಯಲ್ಲಿ ನಡೆಸಿದ ಸರ್ಜಿಕಲ್ ದಾಳಿ ಭಾರತೀಯರಲ್ಲಿ ಹೆಮ್ಮೆಯನ್ನು ಮೂಡಿಸಿದ್ದರೆ, ಕಾಂಗ್ರೆಸ್‌ಗೆ ರಾಜಕೀಯ ಲಾಭದ ಸರಕಾಗಿದೆ. ಸ್ಟ್ರೈಕ್ ನಡೆದ ನಂತರ ಮೋದಿ ನೇತೃತ್ವದ ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಈಗ ಉಲ್ಟಾ ಹೊಡೆದಿದ್ದು, ಮೋದಿಯನ್ನು ಖೂನ್ ಕಿ ದಲಾಲಿ ಎಂದು ಕರೆದಿದ್ದಾರೆ.
ಯಾವುದೇ ಒಂದು ರಾಜ್ಯ ಹಾಗೂ ರಾಷ್ಟ್ರದ ರಕ್ಷಣೆ ವಿಚಾರದಲ್ಲಿ ಸಾವು ನೋವು ಸಂಭವಿಸುವುದು ಹಾಗೂ ಬಲಿದಾನ ಅನಿವಾರ್ಯವಾಗಿರುತ್ತದೆ. ರಕ್ತ ಹರಿಯದೇ ನಡೆದ ಯುದ್ಧ ಇತಿಹಾಸದಲ್ಲಿ ಯಾವುದೂ ಇಲ್ಲ. ಅದೇ ರೀತಿಯಲ್ಲಿ ಮೊನ್ನಿನ ದಾಳಿಯಲ್ಲಿ ಹೋರಾಡಿರುವ ಭಾರತೀಯ ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಎನ್ನುವುದು ನಮ್ಮ ಹೆಮ್ಮೆ..
ಈ ದೇಶದ ಯಾವೊಬ್ಬ ಯೋಧನೂ ದೇಶಕ್ಕಾಗಿ ಪ್ರಾಣ ನೀಡಲು ಹಿಂಜರಿಯದೇ, ತ್ಯಾಗಕ್ಕೆ ಸಿದ್ಧರಾಗಿ ರುವ ಯೋಧರ ವಿಚಾರವನ್ನು ಮೋದಿಯನ್ನು ಟೀಕಿ ಸಲು ರಾಹುಲ್‌ಗಾಂಧಿ ಬಳಸಿಕೊಂಡಿರುವುದು ನಿಜಕ್ಕೂ ನಾಚಿಕೆಗೇಡಿನ ವಿಚಾರ.
ರಾಹುಲ್ ಮೋದಿಯನ್ನು ಖೂನ್ ಕಿ ದಲಾಲಿ ಎಂದು ಕರೆದಿರುವುದನ್ನು ನೋಡಿದರೆ, ಹಿಂದೆ 2007ರಲ್ಲಿ ಗುಜರಾತ್ ಚುನಾವಣೆ ವೇಳೆ ಮಾತನಾ ಡಿದ್ದ ಸೋನಿಯಾಗಾಂಧಿ, ಮೋದಿಯನ್ನು ಮೌತ್ ಕಾ ಸೌದಾಗರ್ ಎಂದು ಕರೆದಿದ್ದು, ಹಾಗೂ ಇಂದಿರಾಗಾಂಧಿ ಹತ್ಯೆ ನಂತರ ನಡೆದ ಸಿಖ್ ಹತ್ಯಾಕಾಂಡದ ವಿಚಾರದಲ್ಲಿ ಒಂದು ದೊಡ್ಡ ಮರ ಉರುಳಿದಾಗ ಸಣ್ಣ, ಸಣ್ಣ ಗಿಡಗಳು ಹೋಗುವುದು ಸಾಮಾನ್ಯ ಎಂದು ಹೇಳಿದ್ದ ರಾಜೀವ್ ಗಾಂಧಿಯ ಮಾತುಗಳು ನೆನಪಿಗೆ ಬರುತ್ತವೆ.
ರಾಹುಲ್‌ಗಾಂಧಿಯವರೇ, ಮೋದಿಯನ್ನು ಟೀಕಿ ಸುವ ಭರದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಸೈನಿಕರ ರಕ್ತವನ್ನು ವ್ಯಾಪಾರಕ್ಕೆ ಹೋಲಿಸಿದ್ದೀರಿ. ಸೈನಿಕರ ರಕ್ತವೇನು ವ್ಯಾಪಾರದ ಸರಕಾಗಿದೆಯೇ? ಸೈನಿ ಕರ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವೇ? ಇಂದು ನಿಮ್ಮನ್ನು ಕಾಯುತ್ತಿರುವುದು ಸೈನಿಕರೇ ಎಂಬುದು ನೆನಪಿರಲಿ.
ಈಗ ಇಷ್ಟೆಲ್ಲಾ ಮಾತನಾಡುವ ನೀವು, ಮೋದಿಯನ್ನು ರಕ್ತದ ದಲ್ಲಾಳಿ ಎಂದು ಕರೆಯುತ್ತೀರಾದರೆ, ನಿಮ್ಮ ಅಜ್ಜಿ ಹತ್ಯೆ ಆದಾಗ, ನೂರಾರು ಸಿಖ್ಖರನ್ನು ಕೊಲ್ಲಲಾಯಿತಲ್ಲ ಅದರ ಹಿಂದಿದ್ದ ನಿಮ್ಮ ಪಕ್ಷದ ಕೈವಾಡಕ್ಕೆ ನಿಮ್ಮನ್ನು ಏನೆಂದು ಕರೆಯಬೇಕು? ಸಾವಿನ ದಲ್ಲಾಳಿ, ಯಮನ ಏಜೆಂಟ್ ಎಂದು ಕರೆಯಬಹುದೇ?
ನೀವೊಬ್ಬ ರಾಷ್ಟ್ರೀಯ ಪಕ್ಷದ ಉಪಾಧ್ಯಕ್ಷರು. ಆ ಸ್ಥಾನದ ಜವಾಬ್ದಾರಿಯನ್ನು ಅರಿತು ಮಾತನಾಡು ವುದನ್ನು ಕಲಿಯಿರಿ. ದೇಶದ ಭದ್ರತೆ ವಿಚಾರದಲ್ಲಿ ಅತ್ಯಂತ ಸೂಕ್ಷ್ಮತೆಯನ್ನು ಹೊಂದಿರುವ ಈ ಸಂದರ್ಭದಲ್ಲಿ ಅದರ ಗಾಂಭೀರ್ಯತೆಯನ್ನು ಅರಿಯದೇ, ರಾಜಕೀಯ ಸ್ವಾರ್ಥಕ್ಕಾಗಿ ಈ ರೀತಿಯ ಹೇಳಿಕೆ ನೀಡುತ್ತೀರ ಎಂದರೆ ನೀವು ಇನ್ನೆಂತಹ ಅಪ್ರಭುದ್ಧತೆಯನ್ನು ಹೊಂದಿದ್ದೀರಿ ಎನ್ನುವುದು ವೇದ್ಯವಾಗುತ್ತದೆ.
Discussion about this post