Read - < 1 minute
ಲಖ್ನೌ:ಸೆ:26;ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಿಸಾನ್ ಯಾತ್ರೆ ನಡೆಸುತ್ತಿದ್ದಾಗ ಅವರ ಮೇಲೆ ವ್ಯಕ್ತಿಯೊಬ್ಬ ಚಪ್ಪಲಿ ಎಸೆದಿರುವ ಘಟನೆ ನಡೆದಿದೆ.
ಇಲ್ಲಿನ ಸೀತಾಪುರ್ ನಗರದಲ್ಲಿ ತೆರದ ವಾಹನದಲ್ಲಿ ರಾಹುಲ್ ಗಾಂಧಿ ರೋದ್ ಶೋ ನಡೆಸುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಜನರಗುಂಪಿನ ಮಧ್ಯದಿಂದ ರಾಹುಲ್ ಮೇಲೆ ಶೂ ಎಸೆದಿದ್ದಾನೆ. ಶೂ ದಾಳಿಯಿಂದ ತಕ್ಷಣ ರಾಹುಲ್ ತಪ್ಪಿಸಿಕೊಂಡಿದ್ದಾರೆ. ಶೂ ಎಸೆದಾತನನ್ನು ಅನೂಫ್ ಮಿಶ್ರಾ ಎಂದು ಗುರುತಿಸಲಾಗಿದೆ. ಆತನೊಬ್ಬ ಸ್ಥಳೀಯ ಪತ್ರಕರ್ತನೆಂದು ತಿಳಿದುಬಂದಿದೆ. ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಭಾರತವನ್ನು ಹೈರಾಣಾಗಿಸಿದೆ,ನಾನು ಎರಡು ವರ್ಷಗಳ ಕಾಲ ಪತ್ರಕರ್ತನಾಗಿ ದುಡಿದಿದ್ದು, ಇವರು ಅಧಿಕಾರದಲ್ಲಿದ್ದಾಗ ಏನೇನು ಮಾಡಿದ್ದರು? ಎಂದು ಮಿಶ್ರಾ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ್ದಾನೆ. ಅಲ್ಲದೇ ರಾಹುಲ್ ಗಾಂಧಿ ಕಿಸಾನ್ ಯಾತ್ರಾ ಮೂಲಕ ನಾಟಕವಾಡುತ್ತಿದ್ದಾರೆ ಎಂದು ತಿಳಿಸಿದ್ದಾನೆ.
Discussion about this post