Read - < 1 minute
ಬೆಂಗಳೂರು, ಅ.20: ಇತ್ತೀಚೆಗೆ ಹತ್ಯೆಯಾದ ಆರ್ ಎಸ್ಎಸ್ ಕಾರ್ಯಕರ್ತ ರುದ್ರೇಶ್ ಅವರ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶಾಸಕ ಆರ್. ಅಶೋಕ್, ಸಂಸದ ಪಿ.ಸಿ. ಮೋಹನ್ ಭೇಟಿ ನೀಡಿ ಕುಟುಂಬ ವರ್ಗದವರನ್ನು ಸಾಂತ್ವಾನಗೊಳಿಸಿದರು.
ರುದ್ರೇಶ್ ಅವರ ಪತ್ನಿ ಹಾಗೂ ಮಕ್ಕಳನ್ನು ಸಂತೈಸಿ ಮಾತನಾಡಿದ ಯಡಿಯೂರಪ್ಪ ನಿಮ್ಮೊಂದಿಗೆ ನಾವಿದ್ದೇವೆ ಭಯಪಡಬೇಡಿ ಎಂದು ಅಭಯ ನೀಡಿದರು.
ಶೀಘ್ರ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಅಪರಾಧಿಗಳನ್ನು ಬಂಧಿಸುವ ತನಕ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು. ಇದೊಂದು ಹೇಯ ಕೃತ್ಯವಾಗಿದ್ದು, ಈ ಹತ್ಯೆಯಿಂದ ಜನಸಾಮಾನ್ಯರು ಧೈರ್ಯವಾಗಿ ಸಂಚರಿಸಲು ಹೆದರುವಂತಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಿಡಿಕಾರಿದರು.
Discussion about this post