ಬೆಂಗಳೂರು, ಅ.30: ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಪಿಎಫ್ ಐ ಸಂಘಟನೆಯನ್ನು ನಿಷೇಧಿಸುವಂತೆ ಆರ್ ಎಸ್ ಎಸ್ ಒತ್ತಾಯಿಸಿದೆ. ಆದರೆ, ಆರ್ ಎಸ್ ಎಸ್ ಕೂಡಾ ಇಂತಹುದ್ದೇ ಕೆಲಸದಲ್ಲಿ ತೊಡಗಿದೆ. ಅದನ್ನು ಏನು ಮಾಡಬೇಕು ಎಂದು ಪ್ರಶ್ನಿಸಿ, ಆರ್ ಎಸ್ ಎಸ್ ವಿರುದ್ಧ ಕಿಡಿ ಕಾರಿದ್ದಾರೆ.
2047ರ ಒಳಗೆ ಭಾರತ ಮುಸ್ಲಿಂ ರಾಷ್ಟ್ರದ ಗುರಿ
ರುದ್ರೇಶ್ ಹತ್ಯೆ ವಿಚಾರವಾಗಿ ದಿನದಿಂದ ದಿನಕ್ಕೆ ಒಂದೊಂದು ಮಾಹಿತಿಗಳು ಹೊರಬರುತ್ತಿದ್ದು, 2047ರೊಳಗೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ದುರುದ್ದೇಶ ರುದ್ರೇಶ್ ಹತ್ಯೆ ಹಿಂದಿರುವ ದುಷ್ಕರ್ಮಿಗಳದ್ದಾಗಿತ್ತು ಎಂದು ಆಗಂತಕಾರಿ ಮಾಹಿತಿ ಹೊರಬಿದ್ದಿದೆ.
ಈ ಕುರಿತಂತೆ ವರದಿಯಾಗಿದ್ದು, ಬಂಧಿತ ಆರೋಪಿಗಳಾದ ಮೊಹಮದ್ ಸಾದಿಕ್, ಮೊಹಮದ್ ಮುಜೀಬುಲ್ಲಾ, ವಾಸೀಂ ಹಾಗೂ ಇರ್ಫಾನ್ ಅವರ ವಿಚಾರಣೆ ವೇಳೆ ಈ ಮಾಹಿತಿ ಹೊರಬಂದಿದೆ.
ವಿಚಾರಣೆ ವೇಳೆ ಹಲವು ಆಘಾತಕಾರಿ ಮಾಹಿತಿಗಳು ಹೊರಬಿದ್ದಿದ್ದು, ಬಿಜೆಪಿ ಹಾಗೂ ಹಿಂದೂ ಮುಖಂಡರೇ ದುಷ್ಕರ್ಮಿಗಳ ಟಾರ್ಗೆಟ್ ಆಗಿದ್ದು, ಈ ದುಷ್ಕರ್ಮಿಗಳ ಜಾಲ ಬೆಂಗಳೂರು ನಗರದಾದ್ಯಂತ ಹರಡಿದೆ ಎಂದು ಹೇಳಲಾಗಿದೆ.














