Read - < 1 minute
ಕುರುಕ್ಷೇತ್ರ, ಅ.30: ಪಾಕಿಸ್ಥಾನ ಉಗ್ರರಿಂದ ಭೀಕರವಾಗಿ ಹತ್ಯೆಯಾದ ಯೋಧ ಮನ್ ದೀಪ್ ಸಿಂಗ್ ಅವರ ಅಂತ್ಯಕ್ರಿಯೆ ಇಂದು ನಡೆದಿದ್ದು, ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.
ಜಮ್ಮು ಕಾಶ್ಮೀರ ಅಂತರ್ರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಗಡಿ ಕಾಯುತ್ತಿದ್ದ ವೇಳೆ ನುಸುಳಿದ ಪಾಕಿಸ್ಥಾನ ಪಡೆಗಳು ಯೋಧ ಮನ್ ದೀಪ್ ಸಿಂಗ್ (26)ನನ್ನು ಹತ್ಯೆ ಮಾಡಿ ತುಂಡುತುಂಡಾಗಿ ಕತ್ತರಿಸಿದ್ದರು. ದೇಶದಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದರೆ ಯೋಧ ಮನ್ ದೀಪ್ ಮನೆಯಲ್ಲಿ ದುಃಖ ಮಡುಗಟ್ಟಿದೆ.
ಹರ್ಯಾಣದ ಕುರುಕ್ಷೇತ್ರ ಪ್ರದೇಶದ ಅಂತಹೇಡಿ ಹಳ್ಳಿಯಲ್ಲಿ ವೀರಯೋಧ ಮನ್ ದೀಪ್ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಸಾವಿರಾರು ಜನತೆ ವೀರ ಸೈನಿಕನಿಗೆ ಹೃದಯಪೂರ್ವಕ ನಮನ ಸಲ್ಲಿಸಿದರು. ಅಲ್ಲದೆ ಹಳ್ಳಿಯ ಜನತೆ ದೀಪಾವಳಿ ಹಬ್ಬವನ್ನು ಆಚರಣೆ ಮಾಡದಿರಲು ನಿರ್ಧಾರ ಮಾಡಿದ್ದಾರೆ. ದೀಪ ಬೆಳೆಗಹಿಸುವ ಹಬ್ಬ ,ತಮ್ಮ ಹಳ್ಳಿಯ ದೀಪವನ್ನಾರಿಸಿದ್ದು, ಇದರಿಂದ ಹಳ್ಳಿಯ ಜನತೆ ದೀಪಾವಳಿಯನ್ನು ನಿಲ್ಲಿಸಿದ್ದಾರೆ. ಅಂತಿಮ ಸಂಸ್ಕಾರದ ಕೊನೆ ಗಳಿಗೆಯಲ್ಲಿ ಸಾವಿರಾರು ಜನರು ಘೋಷ ವಾಕ್ಯಗಳೊಂದಿಗೆ ಗೌರವ ಅರ್ಪಿಸಿದ್ದಾರೆ.
ಟ್ರಕ್ ಚಾಲಕನ ಪುತ್ರನಾದ ಮನ್ ದೀಪ್ 2009ರಲ್ಲಿ ಸೇನೆ ಸೇರಿದ್ದರು. ಬಳಿಕ 17 ಸಿಖ್ ಲೈಟ್ ಇನ್ಫಂಟ್ರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮನ್ ದೀಪ್ 2014ರಲ್ಲಿ ಪ್ರೇರಣಾ ಅವರನ್ನು ವಿವಾಹವಾಗಿದ್ದರು. ಪ್ರೇರಣಾ ಅವರು ಹರ್ಯಾಣದ ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮನ್ ದೀಪ್ ಗೆ ಸೆಲ್ಯೂಟ್
ಮಾಜಿ ಭಾರತೀಯ ಕ್ರಿಕೆಟಿಗ ವಿರೇಂದ್ರ ಸೆಹವಾಗ್ ಅವರು ಯೋಧ ಮನ್ ದೀಪ್ ಅವರಿಗೆ ನಮನ ಸಲ್ಲಿಸಿದ್ದಾರೆ. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರಯೋಧ ಮನ್ ದೀಪ್ ಅವರಿಗೆ ದೇಶದ ಎಲ್ಲಾ ಜನತೆ ಇಂದು ದೀಪವನ್ನು ಬೆಳಗಿಸಿ ಎಂದು ವಿರೇಂದ್ರ ಸೇಹ್ವಾಗ್ ಅವರು ಕೇಳಿಕೊಂಡಿದ್ದಾರೆ.
ಏನಾಯಿತು ಅಂದು
ಶನಿವಾರ ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಕಾವಲು ಕಾಯುತ್ತಿದ್ದ ಯೋಧನನ್ನು ಗುಂಡಿಕ್ಕಿ ಹತ್ಯೆ ಮಾಡಿವೆ. ಯೋಧ ಮನ್ ದೀಪ್ ಸಿಂಗ್ (27) ಹತ್ಯೆ ಮಾಡಿ ದೇಹವನ್ನು 2 ತುಂಡಾಗಿಸಿ ಕ್ರೌರ್ಯ ಮೆರೆದಿದ್ದರು. ಇದಾದ ಬಳಿಕ ಪಾಕಿಸ್ಥಾನ ಪಡೆಗಳ ಈ ಕೃತ್ಯದಿಂದ ರೊಚ್ಚಿಗೆದ್ದ ಭಾರತೀಯ ಯೋಧರು ಪಾಕ್ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಪಾಕಿಸ್ಥಾನದ ಪಡೆಗಳ 4 ಪ್ರದೇಶಗಳನ್ನು ಧ್ವಂಸ ಮಾಡಿದ್ದರು. ಅಲ್ಲದೇ ಈ ವೇಳೆ 20ಕ್ಕೂ ಹೆಚ್ಚು ಪಾಕಿಸ್ಥಾನಿ ಯೋಧರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
Discussion about this post