ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಾದ್ಯಂತ ಇಂದು 17 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.
ಬಿಆರ್’ಪಿ ಗ್ಯಾರೇಜ್ ಕ್ಯಾಂಪ್’ನಲ್ಲಿ 25 ಹಾಗೂ 65 ವರ್ಷದ ಇಬ್ಬರು ಪುರುಷರು, ಎಚ್’ಕೆ ಜಂಕ್ಷನ್’ನಲ್ಲಿ 26 ವರ್ಷದ ಯುವಕ, ಉಜ್ಜಿನೀಪುರದಲ್ಲಿ 65 ವರ್ಷದ ವೃದ್ಧೆ ಹಾಗೂ 36 ವರ್ಷದ ಪುರುಷ, ಬೊಮ್ಮನಕಟ್ಟೆಯಲ್ಲಿ 45 ವರ್ಷದ ಪುರುಷ, ಹೊಳೆ ನೇರಳೇಕೆರೆಯ 6 ವರ್ಷದ ಬಾಲಕ, ದೊಣಬಘಟ್ಟದ 65 ವರ್ಷದ ವೃದ್ಧ, ತಡಸದ 45 ವರ್ಷದ ಮಹಿಳೆ, ಮರಾಠ ಬೀದಿ 62 ವರ್ಷದ ಪುರುಷ ಹಾಗೂ 55 ವರ್ಷದ ಮಹಿಳೆ, ಹುತ್ತಾ ಕಾಲೋನಿಯಲ್ಲಿ 67 ವರ್ಷದ ವೃದ್ಧ, ಅಂಬೇಡ್ಕರ್ ಸರ್ಕಲ್’ನ 44 ವರ್ಷದ ಪುರುಷ, ಗಾಂಧಿನಗರದ 55 ವರ್ಷದ ಮಹಿಳೆ, ಜನ್ನಾಪುರದ 57 ವರ್ಷದ ಮಹಿಳೆ, ಅರೆಬಿಳಚಿಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಸೀಗೆಬಾಗಿಯ 41 ವರ್ಷದ ಪುರುಷ, ಹೊಳೆಹೊನ್ನೂರಿನ 24 ವರ್ಷದ ಯುವತಿಯಲ್ಲಿ ಇಂದು ಸೋಂಕು ಕಾಣಿಸಿಕೊಂಡಿದೆ.
ಸೋಂಕಿತರ ನಿವಾಸದ ಸ್ಥಳಗಳಿಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ನಗರಸಭೆ ಆಯುಕ್ತ ಮನೋಹರ್, ಆರೋಗ್ಯ ಹಿರಿಯ ನಿರೀಕ್ಷಕ ನೀಲೇಶ್ ರಾಜ್ ಮುಂತಾದವರು ಭೇಟಿ ನೀಡಿದ್ದಾರೆ.
Get In Touch With Us info@kalpa.news Whatsapp: 9481252093
















