ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್’ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್’ನ್ನು ಉಗ್ರರು ಸ್ಫೋಟಿಸಿರುವ ಪರಿಣಾಮ ವೀರಸ್ವರ್ಗ ಸೇರಿದ ಯೋಧರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಸುಮಾರು 70 ಸೇನಾ ವಾಹನಗಳು ಚಲಿಸುತ್ತಿದ್ದ ಕಾನ್ವೆಯಲ್ಲಿ ಉಗ್ರರು ಐಇಡಿ ಸ್ಫೋಟಿಸಿದ ಪರಿಣಾಮ ಭಾರೀ ದುರ್ಘಟನೆ ನಡೆದಿದೆ. ಸ್ಫೋಟಗೊಂಡ ವಾಹನ ಹೊರತಾಗಿ ಇನ್ನುಳಿದಂತೆ ಕಾನ್ವೆನಲ್ಲಿ ಸುಮಾರು 2500 ಯೋಧರು ಇದ್ದರು ಎಂದು ಹೇಳಲಾಗಿದೆ.
ಇಂದು ಮಧ್ಯಾಹ್ನ ಪುಲ್ವಾಮಾದ ಆವಂತಿಪೋರಾದ ಗೋರಿಪುರ ಪ್ರದೇಶದಲ್ಲಿ ಸಾಗುತ್ತಿದ್ದ ಸಿಆರ್’ಪಿಎಫ್ ವಾಹನಗಳ ಸಾಲನ್ನು ಗುರಿ ಇರಿಸಿ ಐಇಡಿ ಬ್ಲಾಸ್ಟ್ ನಡೆಸಿದೆ.
1980ರಲ್ಲಿ ಪಾಕ್ ಯೋಧರು ನಡೆಸಿದ ಭಾರೀ ದಾಳಿಯ ನಂತರ ನಡೆದ ಅತ್ಯಂತ ದೊಡ್ಡ ಉಗ್ರರ ದಾಳಿ ಇದಾಗಿದೆ.
Discussion about this post