ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಮೇ 17ರ ನಂತರ ಲಾಕ್ ಡೌನ್ ಮುಂದುವರೆಯಲಿದ್ದು ಲಾಕ್ ಡೌನ್ 4ನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಕೊರೋನಾ ಜೊತೆಯೇ ಜೀವಿಸುವುದನ್ನು ಕಲಿಯಬೇಕು, ಕೊರೋನಾ ಸವಾಲನ್ನು ನಾವು ಭಾರತವನ್ನು ಹೊಸ ಮನ್ವಂತರದೆಡೆಗೆ ಕರೆದೊಯ್ಯಲು ಬಳಸಿಕೊಳ್ಳಬೇಕು. ಲಾಕ್ ಡೌನ್ 4 ಹೊಸ ರೂಪ ಹಾಗೂ ಹೊಸ ನಿಯಮಾವಳಿಗಳೊಂದಿಗೆ ಮುಂದುವರೆಯಲಿದ್ದು, ಮೇ 18ಕ್ಕೂ ಮುನ್ನವೇ ಇದನ್ನು ಘೋಷಣೆ ಮಾಡಲಾಗುತ್ತದೆ ಎಂದರು.
ಕೊರೋನಾ ಲಾಕ್ ಡೌನ್ ಸಂಕಷ್ಟದಲ್ಲಿರುವ ಭಾರತವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿ ದೇಶದ ಜಿಡಿಪಿಯ ಶೇ.10ರಷ್ಟು ಪ್ರಮಾಣದ 20 ಲಕ್ಷ ಕೋಟಿ ರೂ. ಮೊತ್ತದ ಬೃಹತ್ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಕೊರೋನಾ ಸಂಕಷ್ಟದಲ್ಲಿರುವ ರೈತರು, ಕಾರ್ಮಿಕರು, ಶ್ರಮಿಕರು ಹಾಗೂ ಮಧ್ಯಮ ವರ್ಗದ ಜನರ ನೆರವಿಗಾಗಿ ಈ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ಈ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ವಿತ್ತ ಸಚಿವರು ನಾಳೆ ಪ್ರಕಟಿಸಲಿದ್ದಾರೆ ಎಂದರು.
ಬಡವರ, ರೈತರ ಹಾಗೂ ಶ್ರಮಿಕರ ಜೇಬಿಗೆ ಈ ಹಣ ನೇರವಾಗಿ ಬೀಳಲಿದೆ. ಜನಧನ್, ಆಧಾರ್ ಹಾಗೂ ಮೊಬೈಲ್ ಮೂಲಕ ನೇರವಾಗಿ ಮಾಹಿತಿ ದೊರೆಯಲಿದೆ. ಸರ್ಕಾರ ನೀಡುವ ಪ್ರತಿ ಪೈಸೆಯೂ ಸಹ ಶ್ರಮಿಕರಿಗೆ, ಬಡವರಿಗೆ ನೇರವಾಗಿ ದೊರೆಯಲಿದೆ ಎಂದರು.
ವಿಶ್ವದಲ್ಲಿ 42 ಲಕ್ಷ ಮಂದಿ ಕೊರೋನಾ ಪೀಡಿತರಾಗಿದ್ದಾರೆ. ಭಾರತದಲ್ಲೂ ಬಹಳಷ್ಟು ಮಂದಿ ಇದರಿಂದ ಸಂಕಷ್ಟಕ್ಕೆ ಒಳಗಾಗಿದ್ದು, ತಮ್ಮ ಕುಟುಂಬಸ್ತರು ಹಾಗೂ ಸಂಬಂಧಿಗಳನ್ನು ಕಳೆದುಕೊಂಡಿದ್ದಾರೆ. ಇದು ಮನುಕುಲಕ್ಕೆ ಕಲ್ಪನಾತೀತಿ ಸನ್ನಿವೇಶ ಎಂದು ವಿಷಾದಿಸಿದರು.
ವಿಶ್ವದಲ್ಲಾಗುತ್ತಿರುವ ಬದಲಾವಣೆಗಳನ್ನು ನಾವು ನೋಡುತ್ತಿದ್ದೇವೆ. 21ನೆಯ ಶತಮಾನದ ಭಾರತದ ಶತಮಾನ ಎಂದು ಸಾಬೀತಾಗುತ್ತಿದೆ. ನಾವು ಉಳಿಯಬೇಕಿದೆ, ಭಾರತವನ್ನು ಉಳಿಸಿ ಮುಂದೆ ಸಾಗಬೇಕಿದೆ. ಸ್ವಾವಲಂಭಿ ಭಾರತ ಎಂದು ನಮ್ಮ ಶಾಸ್ತ್ರಗಳೇ ಹೇಳಿವೆ. ಈಗ ಇಡಿಯ ವಿಶ್ವಕ್ಕೆ ನಾವು ಮಾದರಿಯಾಗಬೇಕಿದೆ. ಕೋವಿಡ್ ಸಂಕಟ ಶುರುವಾದ ಸಂದರ್ಭದಲ್ಲಿ ಭಾರತದಲ್ಲಿ ಪಿಪಿಇ ಕಿಟ್ ತಯಾರಾಗುತ್ತಿರಲಿಲ್ಲ, ಎನ್ 95 ಮಾಸ್ಕ್’ಗಳು ಕೆಲವು ಸಂಖ್ಯೆಯಲ್ಲಿ ಮಾತ್ರವೇ ಉತ್ಪಾದನೆಯಾಗುತ್ತಿತ್ತು. ಈಗ ಭಾರತದಲ್ಲಿ ದಿನಂಪ್ರತಿ 2 ಲಕ್ಷ ಪಿಪಿಇ ಕಿಟ್ ಹಾಗೂ ಎನ್ 95 ಮಾಸ್ಕ್ ಗಳನ್ನು ತಯಾರಿಸುತ್ತಿದೆ ಎಂದರು.
Watch Live! https://t.co/2q166DcOlc
— PMO India (@PMOIndia) May 12, 2020
ಸುಖ ಹಾಗೂ ಸಂಮೃದ್ಧಿಯ ವಿಶ್ವವನ್ನು ಕಟ್ಟುವುದು ಭಾರತೀಯರ ಕನಸಾಗಿದೆ. ಭಾರತೀಯರು ಭೂಮಿಯನ್ನು ತಾಯಿ ಎಂದು ಪೂಜಿಸುತ್ತೇವೆ. ವಿಶ್ವವೇ ಒಂದು ಪರಿವಾರ ಎಂದು ನಾವು ಭಾರತೀಯರು ನಂಬಿಕೊಂಡು ಬಂದಿದ್ದೇವೆ. ಟಿಬಿ, ಪೋಲಿಯೋ, ಅಪೌಷ್ಠಿಕತೆ ಹೊಡೆದೋಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಕೊರೋನಾ ಸಂಕಷ್ಟ ವಿಶ್ವದಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತಿದೆ. ಇಂತಹ ಸಂದರ್ಭದಲ್ಲಿ ಸ್ವಾವಲಂಭಿ ಭಾರತ ಎಂಬುದರ ಕುರಿತಾಗಿ ಗಂಭೀರವಾಗಿ ಚಿಂತಿಸಬೇಕಿದೆ. ನಮ್ಮ ಸಂಕಲ್ಪ ಮತ್ತಷ್ಟು ದೃಢವಾಗಬೇಕು ಎಂದರು.
ಈ ಶತಮಾನದ ಆರಂಭದಲ್ಲಿ ವೈ2ಕೆ ಸಮಸ್ಯೆ ಎದುರಾಗಿತ್ತು. ಆದರೆ, ಇದರ ವಿರುದ್ದದ ಹೋರಾಟದಲ್ಲಿ ನಮ್ಮ ತಂತ್ರಜ್ಞರು ವಿಜಯಿಯಾದರು. ನಾನು ಕಛ್ ಭೂಕಂಪವನ್ನು ಕಣ್ಣಾರೆ ಕಂಡಿದ್ದೇನೆ. ನೋಡನೋಡುತ್ತಿದ್ದಂತೆಯೇ ಸಾವಿನ ಹೊದಿಕೆ ಕಳಚಲಿದೆ. ಭಾರತ ಈಗ ಗುಲಾಮಿ ಮನಃಸ್ಥಿತಿಯಿಂದ ಹೊರಬಂದಿದೆ. ಭಾರತದಲ್ಲಿರುವಷ್ಟು ಪ್ರತಿಭೆಗಳು ಬೇರೆಲ್ಲೂ ಇಲ್ಲ. ಇದಕ್ಕೆ ಪೂರೈಕೆ ಜಾಲವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ. ಭಾರತ ಎಂತಹ ಸಮಸ್ಯೆ, ಸವಾಲುಗಳನ್ನು ಬೇಕಾದರೂ ಎದುರಿಸಬಲ್ಲದು. ತಂತ್ರಜ್ಞಾನವನ್ನು ಬಳಸಿಕೊಂಡು ನಾವು ಇನ್ನಷ್ಟು ಪ್ರಬಲವಾಗಿ ಬೆಳೆಯಬೇಕಾಗಿದೆ. ವಿಶ್ವವೇ ಒಂದು ಪರಿವಾರ. ಭಾರತವು ವಿಶ್ವದ ಅತ್ಯುತ್ತಮ ಪ್ರತಿಭೆಯನ್ನು ಹೊಂದಿದೆ, ನಾವು ಉತ್ತಮ ಉತ್ಪನ್ನಗಳನ್ನು ತಯಾರಿಸುತ್ತೇವೆ, ಪೂರೈಕೆ ಸರಪಳಿಗಳನ್ನು ಹೆಚ್ಚು ಮುಂಗಡ ಮಾಡುತ್ತೇವೆ ಎಂದರು.
Get in Touch With Us info@kalpa.news Whatsapp: 9481252093
Discussion about this post