ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಲ್ಲಿ ಸೋಮವಾರ ಒಟ್ಟು 29 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಎಂಎಂ ಕಾಂಪೌಂಡ್’ನ 42 ವರ್ಷದ ಪುರುಷ, ಹುತ್ತಾ ಕಾಲೋನಿಯ 33 ವರ್ಷದ ಪುರುಷ, ಹೊಸಮನೆ ಸೈಂಟ್ ಮೇರೀಸ್ ಶಾಲೆಯ ಬಳಿ 74 ವರ್ಷದ ಪುರುಷ, 61 ವರ್ಷದ ಪುರುಷ(ವಿವರ ತಿಳಿದುಬಂದಿಲ್ಲ), ಆನವೇರಿ ಶ್ರೀನಿವಾಸಪುರ 30 ವರ್ಷದ ಪುರುಷ, ವಿಶ್ವೇಶ್ವರ ನಗರ 29 ವರ್ಷದ ಪುರುಷ, ಗಣೇಶ ಕಾಲೋನಿಯ 40 ವರ್ಷದ ಪುರುಷ, 66 ವರ್ಷದ ವೃದ್ಧ, 60 ವರ್ಷದ ವೃದ್ಧೆ, ಹುತ್ತಾ ಕಾಲೋನಿ 31 ವರ್ಷದ ಪುರುಷ, ಹೊಳೆಹೊನ್ನೂರು ವಿದ್ಯಾನಗರದ 26 ವರ್ಷದ ಯುವಕ, ಅಗರದಳ್ಳಿ ದೊಡ್ಡಸೀಗೆ 23 ವರ್ಷದ ಯುವಕ, 24 ವರ್ಷದ ಯುವತಿ ಹಾಗೂ 47 ವರ್ಷದ ಮಹಿಳೆ, ಹೊಸಮನೆ ಚಾನಲ್ ಏರಿಯಾ ಪುರುಷ, ಬಿಎಚ್ ರಸ್ತೆ 7ನೆಯ ಕ್ರಾಸ್ ಪುರುಷ, ಕಡದಕಟ್ಟೆ ಒಂದು, ಪೊಲೀಸ್ ಅಧಿಕಾರಿ ಹೊಸಮನೆಯ ನಿವಾಸಿ, ಸಿದ್ದರೂಢನಗರ ಶಂಕರಮಠದ ಬಳಿಯ ಇಬ್ಬರು ಪುರುಷ, ಹಳೇನಗರದ ಬ್ರಾಹ್ಮಣರ ಬೀದಿಯ ಪುರುಷ, ಕೆರೆಬೀರನಹಳ್ಳಿ ಪುರುಷ, ಬಂಡಿಗುಡ್ಡದ ಪುರುಷ, ಹುತ್ತಾ ಕಾಲೋನಿಯ ಪುರುಷ, ದೇವರನರಸೀಪುರದ ಪುರುಷ, ಓರ್ವ ಟ್ರಾಫಿಕ್ ಪೇದೆ, ಡಿಎಆರ್’ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕ ಪುರುಷ, ವೇಲು ಶೆಡ್’ನ 55 ಹಾಗೂ 23 ವರ್ಷದ ಮಹಿಳೆಯರಿಗೆ ಪಾಸಿಟಿವ್ ಬಂದಿದೆ.

ಸೋಂಕಿತನ ನಿವಾಸದ ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ನಗರಸಭೆ ಆಯುಕ್ತ ಮನೋಹರ್, ಆರೋಗ್ಯ ಇಲಾಖೆಯ ನೀಲೇಶ್ ರಾಜ್ ಮುಂತಾದವರು ಭೇಟಿ ನೀಡಿದ್ದಾರೆ.
Get In Touch With Us info@kalpa.news Whatsapp: 9481252093
















