ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ಪಾಕಿಸ್ಥಾನದ ಪರಿಧಿಯೊಳಗೆ ನುಗ್ಗಿ ಉಗ್ರರ ಅಡಗುತಾಣಗಳ ಮೇಳೆ ದಾಳಿ ನಡೆಸಿದ ವೇಳೆ ಛಿದ್ರ ಛಿದ್ರವಾದ ನೂರಾರು ಉಗ್ರರಲ್ಲಿ ಮೊದಲ 42 ನಟೋರಿಯಸ್’ಗಳ ವಿವರ ಬಿಡುಗಡೆಯಾಗಿದೆ.
ಗುಪ್ತಚರ ಇಲಾಖೆಯ ಮೂಲಕ ಈ ಮಾಹಿತಿಗಳ ಬಹಿರಂಗಗೊಂಡಿದ್ದು, ನಟೋರಿಯಸ್ ಎಂದೇ ಕರೆಸಿಕೊಳ್ಳುವ ಭಾರತದ ವಿವಿಧೆಡೆ ಆತ್ಮಹತ್ಯಾ ದಾಳಿಗೆ ಸಿದ್ದರಾಗಿದ್ದ 42 ಉಗ್ರರು ನಮ್ಮ ಸೇನೆಯ ದಾಳಿಗೆ ಬೂದಿಯಾಗಿ ಹೋಗಿದ್ದಾರೆ.
ಬಾಲ್ಕೋಟ್’’ನಲ್ಲಿ ಭಾರತೀಯ ವಾಯುಸೇನೆ ನಡೆಸಿದ ದಾಳಿಯಲ್ಲಿ ಜೈಷ್ ಸಂಘಟನೆಯ ಈ 42 ಉಗ್ರರು ಸತ್ತಿದ್ದು, ಭಾರತದಲ್ಲಿ ಮುಂದೆ ನಡೆಯಲಿದ್ದ ಭಾರೀ ಉಗ್ರರ ದಾಳಿ ಇದರಿಂದ ತಪ್ಪಿದೆ ಎಂದು ವರದಿಯಾಗಿದೆ.
ಬಾಲ್ಕೋಟ್’ನಲ್ಲಿದ್ದ ಶಿಬಿರವನ್ನು ಜೈಷ್ ಉಗ್ರರ ಸಂಘಟನೆಯ ಮುಖ್ಯಸ್ತ ಮೌಲಾನಾ ಮಸೂದ್ ಅಝರ್ ಸಹೋದರ ಮೊಹಮದ್ ಸಲೀಮ್ ಅಲಿಯಾಸ್ ಉಸ್ತಾದ್ ಘೌರಿ ವಹಿಸಿದ್ದನು ಎಂಬುದು ಈಗ ಬಹಿರಂಗಗೊಂಡಿದೆ. ಇಲ್ಲಿ ವಾಯುಸೇನೆ ನಡೆಸಿದ ದಾಳಿಯಲ್ಲಿ ಒಟ್ಟು 42 ಸೂಸೈಡ್ ಬಾಂಬರ್’ಗಳು ನಾಶವಾಗಿದ್ದಾರೆ ಎಂದು ವರದಿಯಾಗಿದ್ದು, ಒಟ್ಟಾರೆ ದಾಳಿಯಲ್ಲಿ ಸತ್ತ ಎಲ್ಲ ನೂರಾರು ಉಗ್ರರ ವಿವರಗಳು ಇನ್ನೂ ಬಹಿರಂಗಗೊಳ್ಳಬೇಕಿದೆ.
ಇಲ್ಲಿದೆ ನೋಡಿ ಸತ್ತ ಉಗ್ರರ ವಿವರಗಳು:
(List Courtesy: Zee Media)
Discussion about this post