ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಿರುವ ಬೆನ್ನಲ್ಲೇ ಮಂಗಳೂರಿನಿಂದ ಭದ್ರಾವತಿಗೆ 9 ಮಂದಿ ಆಗಮಿಸಿದ್ದು, ಇವರನ್ನೆಲ್ಲಾ ಪರೀಕ್ಷೆಗಾಗಿ ಸುಬ್ಬಯ್ಯ ಮೆಡಿಕಲ್ ಕಾಲೇಜಿಗೆ ಕಳುಹಿಸಲಾಗಿದೆ.
ಭದ್ರಾವತಿಗೆ ಹೊರ ದೇಶ ಮತ್ತು ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವವರ ಮೇಲೆ ತೀವ್ರ ನಿಗಾವಹಿಸಿ ಕಾರ್ಯ ನಿರ್ವಹಿಸುತ್ತಿರುವಾಗ ತರೀಕೆರೆ ರಸ್ತೆಯ ಭದ್ರಾವತಿ ಗಡಿ ಪ್ರದೇಶವಾದ ಕಾರೆಹಳ್ಳಿ ಚೆಕ್ ಪೋಸ್ಟ್ ಬಳಿ ಕೊರೋನಾ ಪೀಡಿತ ಪ್ರದೇಶವಾದ ಮಂಗಳೂರಿನಿಂದ ಭದ್ರಾವತಿಗೆ 9 ಜನರು ಎರಡು ಕಾರಿನಲ್ಲಿ ಬರುತ್ತಿರುವಾಗ ಆರೋಗ್ಯ ಇಲಾಖೆಯ ತಂಡ ಅವರನ್ನು ವಶಕ್ಕೆ ಪಡೆದು ನಗರದ ಸರ್ಕಾರಿ ಆಸ್ಪತ್ರೆಯ ಆವರಣಕ್ಕೆ ಕರೆ ತಂದಿತು.
ಈ 9 ಜನರ ಪೈಕಿ ಮಹಮದ್ ತ್ಯಯಬ್(18), ಮಹಮದ್ ಬಿಲಾಲ್(18), ಸೀಪತ್ ಮಿಯಾ17), ಅಬ್ಬಾಸ್ ಆಲಿ(22), ಸೈಯದ್ ಖಿಜರ್(21), ತಸೀಲಂಸಾಬ್(28), ಸಮೀರ್ ಬೇಗ್(47) ಈ ಏಳು ಜನರು ಭದ್ರಾವತಿ ತಾಲೂಕಿನ ದಡಂಘಟ್ಟ ನಿವಾಸಿಗಳೆಂದು ಹೇಳಿಕೊಂಡಿದ್ದಾರೆ. ಮಂಗಳೂರಿನ ಹೊಟೇಲ್’ನಲ್ಲಿ ಕೆಲಸ ಮಾಡುತ್ತಿದ್ದು, ಈಗ ಲಾಕ್ ಡೌನ್ ಹಿನ್ನೆಲೆಯಲ್ಲಿ ಇವರುಗಳು ಭದ್ರಾವತಿಯ ತಮ್ಮ ನಿವಾಸವಿರುವ ದಡಂಘಟ್ಟಾಕ್ಕೆ ಬಂದಿರುವುದಾಗಿ ಅಧಿಕಾರಿಗಳಿಗೆ ತಿಳಿಸಿದರು.
ಈ ಏಳು ಜನರನ್ನು ಮಂಗಳೂರಿನ ವಾಹನ ಚಾಲಕ ವೃತ್ತಿಯ ಸಾದಿಕ್ ಹಾಗೂ ಲತೀಫ್ ಇವರುಗಳು ಮಂಗಳೂರಿನ ಹೋಟೆಲ್ ಮಾಲೀಕರಿಗೆ ಸೇರಿದ ಕೆ.ಎ.19-ಎಚಿಡಿ.4441 ಇಂಡಿಕಾ ಕಾರಿನಲ್ಲಿ ಭದ್ರಾವತಿಯ ದಡಂಘಟ್ಟಾ ಗ್ರಾಮಕ್ಕೆ ಕರೆ ತರುತ್ತಿರುವುದಾಗಿ ಅಧಿಕಾರಿಗಳಿಗೆ ತಿಳಿಸಿದರು.
Get in Touch With Us info@kalpa.news Whatsapp: 9481252093
















