ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ವಿಜಯ್ ಸೇತುಪತಿ Vijay Sethupathi ಅಭಿನಯದ ಚಿತ್ರದ ಶೂಟಿಂಗ್ ವೇಳೆ ಸಂಭವಿಸಿದ ಅವಘಡದಲ್ಲಿ ಸ್ಟಂಟ್ ಮಾಸ್ಟರ್ ಸುರೇಶ್ (54) Stuntmaster Suresh ದುರ್ಮರಣಕ್ಕೀಡಾಗಿದ್ದಾರೆ.
ಚೆನ್ನೈನಲ್ಲಿ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರ ವಿಡುತಲೈ’ ಸಿನಿಮಾದ ರೈಲು ದುರಂತದ ಚಿತ್ರೀಕರಣ ಮಾಡಲಾಗುತ್ತಿತ್ತು. ಈ ವೇಳೆ ಸುರೇಶ್ ಹಾಗೂ ಇತರ ಸ್ಟಂಟ್ ಮ್ಯಾನ್’ಗಳನ್ನು ಹಗ್ಗದಲ್ಲಿ ಕ್ರೇನ್’ಗೆ ಕಟ್ಟಲಾಗಿತ್ತು. ಅನಿರೀಕ್ಷಿತವಾಗಿ ಹಗ್ಗ ತುಂಡಾಗಿ ಸುರೇಶ್ ಬಿದ್ದಿದ್ದು, ಸುಮಾರು 20 ಅಡಿ ಎತ್ತರದಿಂದ ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಅಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಮತ್ತೊಬ್ಬ ಸಾಹಸ ಕಲಾವಿದ ಗಾಯಗೊಂಡಿz್ದÁರೆ ಎಂದು ಹೇಳಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















