No Result
View All Result
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp
English Articles

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

by ಕಲ್ಪ ನ್ಯೂಸ್
March 18, 2026
0

Kalpa Media House  |  Manipal | Manipal Institute of Technology (MIT), Manipal, a constituent unit of Manipal Academy of Higher...

Read moreDetails
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
  • Advertise With Us
  • Grievances
  • About Us
  • Contact Us
Friday, March 20, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಸಂವಿಧಾನ ಹೇಳುತ್ತಿರುವುದೊಂದು, ಪ್ರಭುತ್ವ ಮಾಡುತ್ತಿರುವುದೊಂದು: ಸಿ. ಕೆ. ಮಹೇಶ್

ಕುವೆಂಪು ವಿವಿ: ಡಾ. ಬಿ. ಆರ್. ಅಂಬೇಡ್ಕರ್‌ರವರ 66ನೇ ಮಹಾಪರಿನಿಬ್ಬಾಣ ದಿನ ಆಚರಣೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 6, 2022
in ಶಿವಮೊಗ್ಗ
0
ಸಂವಿಧಾನ ಹೇಳುತ್ತಿರುವುದೊಂದು, ಪ್ರಭುತ್ವ ಮಾಡುತ್ತಿರುವುದೊಂದು: ಸಿ. ಕೆ. ಮಹೇಶ್
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಂಕರಘಟ್ಟ  |

ಸಂವಿಧಾನವು ಪ್ರಜಾಪ್ರಭುತ್ವ, ಸಮಾನತೆ, ಜಾತ್ಯಾತೀತತೆ, ಭ್ರಾತೃತ್ವಗಳನ್ನು ಅಳವಡಿಸಿಕೊಳ್ಳಲು ನಿರ್ದೇಶಿಸುತ್ತಿದ್ದರೆ, ಇಂದಿನ ಪ್ರಭುತ್ವವು ತದ್ವಿರುದ್ಧ ದಿಕ್ಕಿನಲ್ಲಿ ವಿಜೃಂಭಿಸುತ್ತಿದೆ ಎಂದು ಚಿತ್ರದುರ್ಗದ ವಿಶ್ರಾಂತ ಪ್ರಾಚಾರ್ಯರು ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಬುದ್ಧರವರ ಚಿಂತಕ ಸಿ. ಕೆ. ಮಹೇಶ್ ವಿಷಾದ ವ್ಯಕ್ತಪಡಿಸಿದರು.

ಕುವೆಂಪು ವಿವಿಯ Kuvempu University ಡಾ, ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ಮಂಗಳವಾರ ಬೆಳಿಗ್ಗೆ ವಿವಿಯ ಪ್ರೊ. ಎಸ್. ಪಿ. ಹಿರೇಮಠ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ ಬಿ. ಆರ್. ಅಂಬೇಡ್ಕರ್‌ರವರ 66ನೇ ಮಹಾಪರಿನಿಬ್ಬಾಣ ದಿನ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಹಿನ್ನೆಲೆಯಾಧರಿಸಿ ಮಾತ್ರ ಮೀಸಲು ನೀಡಲು ಸಂವಿಧಾನ ಅನುವು ಮಾಡಿಕೊಟ್ಟಿತ್ತು. ಆದರೆ ಪ್ರಭುತ್ವವು ಆರ್ಥಿಕ ಮಾನದಂಡದಡಿ ಅದನ್ನು ನೀಡಲು ಆರಂಭಿಸಿರುವುದು ಸಂವಿಧಾನದ ಮೂಲ ಆಶಯಕ್ಕೆ ನೀಡಿದ ಪೆಟ್ಟಾಗಿದೆ. ದಲಿತರ, ಹಿಂದುಳಿದ ಸಮುದಾಯದವರ ಬಡತನ ಮಟ್ಟವನ್ನು 2.5 ಲಕ್ಷಕ್ಕೆ ಮಿತಿಗೊಳಿಸಿರುವ ಆಡಳಿತಾಂಗವು ಮೇಲ್ವರ್ಗಗಳ ಬಡತನ ಮಟ್ಟವನ್ನು 8 ಲಕ್ಷದವರೆಗೂ ವಿಸ್ತರಿಸಿರುವುದು ಅಸಮಾನತೆಯ ನಡೆಯಲ್ಲದೇ ಮತ್ತೇನು? ಎಂದು ಪ್ರಶ್ನಿಸಿದರು.

Also read: ‘ವಚನ -ದಾಸ -ಸಂಭ್ರಮ’ ಕೃತಿ ಲೋಕಾರ್ಪಣೆ, ದಾಸ ಸಾಹಿತ್ಯ ವಿಚಾರಗೋಷ್ಠಿ ಸಂಪನ್ನ

ಅಂಬೇಡ್ಕರ್ ಮತ್ತು ಶರಣ ಚಳವಳಿ
ದಿನವೊಂದರಲ್ಲಿ ಸತತ ಹದಿನೆಂಟು ತಾಸು ಅಧ್ಯಯನದಲ್ಲಿ ತೊಡಗುತ್ತಿದ್ದವರು ಅಂಬೇಡ್ಕರ್. ಅವರು ಜಗತ್ತಿನಲ್ಲೇ ಅತಿಹೆಚ್ಚು ಓದಿದ, ಬರವಣಿಗೆ ಮಾಡಿರುವ, ಮಾತನಾಡಿರುವ ವ್ಯಕ್ತಿಯಾಗಿದ್ದಾರೆ. ಸರ್ವರ ಏಳಗೆ, ಕಾಯಕ, ಸಮಾನತೆ, ಭ್ರಾತೃತ್ವಗಳನ್ನು ಪ್ರಬಲವಾಗಿ ಪ್ರತಿಪಾದಿಸಿದವರು ಬುದ್ಧ ಮತ್ತು ಬಸವಣ್ಣನವರು. ಪಕ್ಕದ ಮಹಾರಾಷ್ಟ್ರದಲ್ಲಿದ್ದ ಬಾಬಾಸಾಹೇಬರು ಆಳವಾಗಿ ಬುದ್ಧನನ್ನು ಅಧ್ಯಯನಿಸಿದರು. ಮುಂದೆ ಬೌದ್ಧ ಧರ್ಮವನ್ನು ಒಪ್ಪಿ ಸ್ವೀಕರಿಸಿದರು. ಆದರೆ ಕರ್ನಾಟಕದಲ್ಲಿ ೧೨ನೇ ಶತಮಾನದಲ್ಲಿಯೇ ರಚಿತವಾದ ವಚನ ಸಾಹಿತ್ಯವನ್ನು ಅವರು ಗಮನಿಸದೇ ಹೋದದ್ದು ವಿಪರ್ಯಾಸ ಮತ್ತು ವಿಷಾದನೀಯ. ಇವನಾರವ, ಇವನಾರವ ಎಂದೆನದಿರಯ್ಯ; ಇವನಮ್ಮವ, ಇವನಮ್ಮವ ಎನಿರಯ್ಯ ಎಂಬ ವಚನಗಳ ಮೌಲ್ಯವನ್ನೇ ತಮ್ಮ ಬದುಕಿನುದ್ದಕ್ಕೂ ಬಾಬಾಸಾಹೇಬರು ಪಸರಿಸಲು ಬಯಸಿದ್ದು. ಅಂಬೇಡ್ಕರ್‌ರ ಗಮನಕ್ಕೆ ಯಾರಾದರೂ ವಚನ ಸಾಹಿತ್ಯದ ಆಶಯಗಳನ್ನು ತಂದಿದ್ದೇ ಆಗಿದ್ದಲ್ಲಿ ಶರಣ ಚಳವಳಿ, ಶರಣ ಧರ್ಮಗಳು ಹಾಗೂ ಕರ್ನಾಟಕ ಮತ್ತು ಭಾರತ ದೇಶಗಳು ಬೇರೋಂದು ರೂಪ, ತಿರುವುಗಳನ್ನು ಪಡೆಯುವ ಸಾಧ್ಯತೆಗಳಿದ್ದವು ಎಂಬುದು ನನ್ನ ಬಲವಾದ ನಂಬಿಕೆ ಎಂದು ಸಿ. ಕೆ. ಮಹೇಶ್ ತಿಳಿಸಿದರು.   

ದಿನದಿನವೂ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು, ಉದ್ಯಮಗಳನ್ನು ಸರ್ಕಾರವೇ ಮುಂದೆನಿಂತು ಮಾರಾಟ ಮಾಡುತ್ತಿರುವುದು ಅಂಬಾನಿ, ಅದಾನಿಗಳನ್ನು ಬಲಶಾಲಿಗಳನ್ನಾಗಿಸುತ್ತಿದೆ. ಹೀಗೆ ಒಬ್ಬ ವ್ಯಕ್ತಿ/ಕುಟುಂಬದ ಬಳಿ ಹಣ, ಸಂಪತ್ತು, ಅಧಿಕಾರಗಳು ಕ್ರೂಢಿಕರಣಗೊಳ್ಳುತ್ತಿರುವುದು ರಾಜ್ಯನೀತಿ ನಿರ್ದೇಶಕ ತತ್ವಗಳ ಉಲ್ಲಂಘನೆಯಾಗಿದೆ. ಪಾರ್ಲಿಮೆಂಟ್, ಶಾಸನ ಸಭೆಗಳಲ್ಲಿ ಶ್ರೀಮಂತರು, ಬಲಾಢ್ಯರು ಹೋಗಿ ಕೂರುತ್ತಿರುವುದು ಅವರ ಅನುಕೂಲಕ್ಕೆ ತಕ್ಕಂತೆ ಕಾನೂನು, ನಿಯಮಾವಳಿಗಳನ್ನು ರೂಪಿಸಿಕೊಳ್ಳಲು ದಾರಿಮಾಡಿಕೊಟ್ಟಿದೆ. ಅಂಬೇಡ್ಕರ್‌ರ ಪ್ರಕಾರ ಚುನಾವಣೆಯಲ್ಲಿ ಮತವೆಂದರೆ ಮೌಲ್ಯವಾಗಿರುತ್ತದೆ. ಆದರೆ ಇಂದು ಮತಕ್ಕೆ ಶ್ರೀಮಂತರು ಅಂಟಿಸಿರುವ ಜಾತಿ, ಧರ್ಮ, ಭಾಷೆ, ಪ್ರಾಂತೀಯತೆ ವಿಚಾರಗಳು ಕೂಡಿಕೊಂಡು ಅದೊಂದು ಸರಕಾಗಿ ಮಾರ್ಪಾಟಾಗಿದೆ. ಶ್ರೀಮಂತರು ಆ ಸರಕನ್ನು ಬಡವರಿಂದ ಚುನಾವಣಾ ಸಮಯದಲ್ಲಿ ಖರೀದಿಸಿ ಗೆದ್ದು ಮತ್ತಷ್ಟು ಕೊಬ್ಬಿಹೋಗುತ್ತಿದ್ದಾರೆ. ಮತವು ಮೌಲ್ಯವೆಂದು ಜನಸಾಮಾನ್ಯರು ಅರಿತು ಎಲ್ಲ ಅಸ್ಮಿತೆಗಳನ್ನು ತೊಡೆದು ಚಲಾಯಿಸಿದಲ್ಲಿ ಒಳ್ಳೆಯ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಅದು ಪ್ರಜಾಪ್ರಭುತ್ವ ಉಳಿಯಲು, ಸಂವಿಧಾನ ಮಾತನಾಡಲು ದಾರಿಮಾಡಿಕೊಡುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಎಲ್ಲ ಯುವಮನಸ್ಸುಗಳು ಅಂಬೇಡ್ಕರ್‌ರನ್ನು ಸ್ಫೂರ್ತಿಯಾಗಿ ಪರಿಗಣಿಸಿ ನಿರಂತರ ಅಧ್ಯಯನದಲ್ಲಿ ತೊಡಗಿ ಉನ್ನತ ಸ್ಥಾನಗಳನ್ನು ಗಳಿಸಬೇಕು. ಆರ್ಥಿಕವಾಗಿ ಸದೃಢರಾಗಿ ಸಮಾನತೆ, ಭ್ರಾತೃತ್ವಗಳನ್ನು ಮೈಗೂಡಿಸಿಕೊಂಡ ಅತ್ಯುತ್ತಮ ಪ್ರಜೆಗಳಾಗಿ ದೇಶವನ್ನು ಮುನ್ನಡೆಸಬೇಕು ಎಂದು ಕರೆಕೊಟ್ಟರು.

ಈ ಸಂದರ್ಭದಲ್ಲಿ ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್‌ಕುಮಾರ್ ಎಸ್. ಕೆ., ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ಅಂಜನಪ್ಪ ಬಿ. ಹೆಚ್.. ಡಾ. ಉದ್ದಗಟ್ಟಿ ವೆಂಕಟೇಶ್, ಸೇರಿದಂತೆ ವಿವಿಯ ವಿವಿಧ ವಿಭಾಗಗಳ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada News WebsiteKannadaNewsKannadaNewsLiveKannadaNewsOnlineKannadaWebsiteKuvempu UniversityLatest News KannadaLocal NewsMalnad NewsNewsinKannadaNewsKannadaShankaraghattaShimogaShivamoggaShivamogga Newsಕುವೆಂಪು ವಿವಿಮಲೆನಾಡು_ಸುದ್ಧಿಶಂಕರಘಟ್ಟಶಿವಮೊಗ್ಗ_ನ್ಯೂಸ್
Share207Tweet123Send
Previous Post

‘ವಚನ -ದಾಸ -ಸಂಭ್ರಮ’ ಕೃತಿ ಲೋಕಾರ್ಪಣೆ, ದಾಸ ಸಾಹಿತ್ಯ ವಿಚಾರಗೋಷ್ಠಿ ಸಂಪನ್ನ

Next Post

ಶರಾವತಿ ಮುಳುಗಡೆ ಸಂತ್ರಸ್ತರ ಜಮೀನು ಸರ್ವೇ ಸಮಸ್ಯೆ ಹಿನ್ನೆಲೆ ಶಾಸಕ ಹಾಲಪ್ಪ ಭೇಟಿ, ಪರಿಶೀಲನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶರಾವತಿ ಮುಳುಗಡೆ ಸಂತ್ರಸ್ತರ ಜಮೀನು ಸರ್ವೇ ಸಮಸ್ಯೆ ಹಿನ್ನೆಲೆ ಶಾಸಕ ಹಾಲಪ್ಪ ಭೇಟಿ, ಪರಿಶೀಲನೆ

ಶರಾವತಿ ಮುಳುಗಡೆ ಸಂತ್ರಸ್ತರ ಜಮೀನು ಸರ್ವೇ ಸಮಸ್ಯೆ ಹಿನ್ನೆಲೆ ಶಾಸಕ ಹಾಲಪ್ಪ ಭೇಟಿ, ಪರಿಶೀಲನೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಜಾಗತಿಕ ಸೈಬರ್ ವಾರ್ಫೇರ್ ಎದುರಿಸಲು ಸಜ್ಜುಗೊಳ್ಳಬೇಕಿದೆ ಭಾರತ

ಜಾಗತಿಕ ಸೈಬರ್ ವಾರ್ಫೇರ್ ಎದುರಿಸಲು ಸಜ್ಜುಗೊಳ್ಳಬೇಕಿದೆ ಭಾರತ

March 20, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಮಂಗಳೂರು-ವಿಜಯಪುರ, ಮೈಸೂರು-ಬಾಗಲಕೋಟೆ ರೈಲುಗಳ ಸಂಚಾರದಲ್ಲಿ ಮಹತ್ವದ ಬದಲಾವಣೆ

March 20, 2026
Mysore – Shivamogga Express Big Update on this Date | Must Read

ಮಂಗಳೂರು-ಸುಬ್ರಹ್ಮಣ್ಯ ರೈಲು ರದ್ದು | ಯಶವಂತಪುರ-ಕಾರವಾರ ಸೇರಿ 7 ರೈಲುಗಳ ಬಿಗ್ ಅಪ್ಡೇಟ್

March 20, 2026
ವಿಐಎಸ್ ಎಲ್ ಆಸ್ಪತ್ರೆ ಅಧಿಕಾರಿ ಶಿವಮೂರ್ತಿ ನಿಧನ

ವಿಐಎಸ್ ಎಲ್ ಆಸ್ಪತ್ರೆ ಅಧಿಕಾರಿ ಶಿವಮೂರ್ತಿ ನಿಧನ

March 20, 2026
ಸ್ಥಳೀಯ ಪತ್ರಿಕೆಗಳ ಮೇಲಿನ ಗದಾಪ್ರಹಾರದ ವಿರುದ್ದ ಹೋರಾಟಕ್ಕೆ ಸಭೆ

ಸ್ಥಳೀಯ ಪತ್ರಿಕೆಗಳ ಮೇಲಿನ ಗದಾಪ್ರಹಾರದ ವಿರುದ್ದ ಹೋರಾಟಕ್ಕೆ ಸಭೆ

March 20, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL