ಕಲ್ಪ ಮೀಡಿಯಾ ಹೌಸ್ | ಬಾಗಲಕೋಟೆ |
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ನಿರಪರಾಧಿ ಎಂದು ಕ್ಲೀನ್ ಚಿಟ್ ದೊರೆತರೂ ನಂತರವೂ ಸಹ ಸಚಿವ ಸ್ಥಾನ ನೀಡದ ಕುರಿತಾಗಿ ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ಈ ಕುರಿತಂತೆ ಮೌನ ಮುರಿದು ಬಹಿರಂಗವಾಗಿ ಮಾತನಾಡಿರುವ ಅವರು, ನಿರಪರಾಧಿ ಎಂದು ಸಾಬೀತಾದ ನಂತರವೂ ಸಹ ನನಗೆ ಯಾಕೆ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿಲ್ಲ ಎಂಬುದಕ್ಕೆ ಸಿಎಂ ಬೊಮ್ಮಾಯಿ ಅವರೇ ಉತ್ತರ ನೀಡಬೇಕು. ನಾನು ಈ ಕುರಿತಂತೆ ಮಾತನಾಡುವುದಿಲ್ಲ ಎಂದಿದ್ದಾರೆ.

ಗುತ್ತಿಗೆದಾರ ಸಂತೋಷ್ ಪ್ರಕರಣದಲ್ಲಿ ಸಚಿವ ಸಂಪುಟದಲ್ಲಿ ಸ್ಥಾನ ಕಳೆದುಕೊಂಡಿದ್ದ ಈಶ್ವರಪ್ಪನವರಿಗೆ ತಮ್ಮ ಕೇಸ್ ನಲ್ಲಿ ಕ್ಲೀನ್ ಚೀಟ್ ಆಗಿ ಬಂದರೆ ತಮಗೆ ಮತ್ತೆ ಸಂಪುಟದಲ್ಲಿ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭರವಸೆ ನೀಡಿದ್ದರು.

Also read: ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ಅನಾವರಣ: ಕಾಂಗ್ರೆಸ್ ಡಬಲ್ ಸ್ಟಾಂಡರ್ಡ್
ಬೆಳಗಾವಿಗೆ ಹೋಗುತ್ತೇನೆ ಆದರೆ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ ಅಧಿವೇಶನದಲ್ಲಿ ಪಾಲ್ಗೊಳ್ಳತ್ತಿರುವುದಕ್ಕೆ ಸ್ಪೀಕರ್ ಹತ್ತಿರ ಅನುಮತಿಯನ್ನು ಪಡೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.












Discussion about this post