ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭವಿಷ್ಯದ ಉತ್ತಮ ಸಮಾಜಕ್ಕಾಗಿ ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಸಮಾಜ ಜವಾಬ್ದಾರಿ ಹೊರಬೇಕು ಎಂದು ವಿಐಎಸ್’ಎಲ್ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ ಕರೆ ನೀಡಿದ್ದಾರೆ.
ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಪರಿಸರ ಮಾಸಾಚರಣೆಯನ್ನು 19ನೇ ನವಂಬರ್, 2022 ರಿಂದ 18 ಡಿಸೆಂಬರ್ 2022ರ ವರೆಗೆ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಕಂಪನಿಯ ಆವರಣದಲ್ಲಿರುವ ಇಸ್ಪಾತ್ ಭವನದ ಮುಂದೆ ಪರಿಸರ ಧ್ವಜಾರೋಹಣ ಮಾಡುವ ಮೂಲಕ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭವಿಷ್ಯದ ಉತ್ತಮ ಆರೋಗ್ಯಕ್ಕಾಗಿ ಪರಿಸರವನ್ನು ಸಂರಕ್ಷಿಸುವ ತುರ್ತು ಅಗತ್ಯವಿದೆ. ಹೀಗಾಗಿ, ಪ್ರತಿಯೊಬ್ಬರು ಪರಿಸರ ರಕ್ಷಣೆಯಲ್ಲಿ ನಾವು ವೈಯುಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಕೊಡುಗೆಯನ್ನು ನೀಡುವ ಬಗ್ಗೆ ಒತ್ತಿ ಹೇಳಿದರು.
ಪರಿಸರ ನೀತಿ ಹಾಗೂ ಪರಿಸರ ಪ್ರತಿಜ್ಞೆಗಳನ್ನು ಹಿರಿಯ ಅಧಿಕಾರಿಗಳು ಭೋದಿಸಿದರು. ಪರಿಸರ ಮಾಸಾಚರಣೆ ಅಂಗವಾಗಿ ಪರಿಸರದ ಬಗ್ಗೆ ಕಾಳಜಿಯನ್ನು ಮೂಡಿಸುವ ಉದ್ದೇಶದಿಂದ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆ, ಪರಿಸರ ರಸಪ್ರಶ್ನೆ ಮತ್ತು ಕುಳಿತು ಚಿತ್ರಬರೆಯುವ ಸ್ಪರ್ಧೆಗಳನ್ನ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಮತ್ತು ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಗಳಲ್ಲಿ ಸುಮಾರು 700 ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಗುತ್ತಿಗೆ ಕಾರ್ಮಿಕರು ಭಾಗವಹಿಸಿದ್ದರು.
ಪರಿಸರ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಕಾರ್ಖಾನೆ ಭದ್ರಾ ಅತಿಥಿಗೃಹದಲ್ಲಿ ಆಯೋಜಿಸಲಾಗಿತ್ತು. ಹಿರಿಯ ಪ್ರಬಂಧಕ (ಹಣಕಾಸು) ಉನ್ನಿಕೃಷ್ಣನ್ ಪ್ರಾರ್ಥಿಸಿದರು. ಶೋಭ ಶಿವಶಂಕರನ್, ಮಹಾ ಪ್ರಬಂಧಕರು (ಹಣಕಾಸು ಮತ್ತು ವಿತ್ತ), ದುಲಾರಿ ಚಂದ್ವಾನಿ, ಅಧ್ಯಕ್ಷರು ಇಸ್ಪಾತ್ ಮಹಿಳಾ ಸಮಾಜ, ಇವರುಗಳು ಗೌರವ ಅತಿಥಿಗಳಾಗಿದ್ದರು.
Also read: ಕಲಿಕೆಗೆ ಗಾಂಧಿಮಾರ್ಗ ಇಂದಿನ ಅಗತ್ಯ: ನಿವೃತ್ತ ಜಂಟಿ ನಿರ್ದೇಶಕ ತಿರುಮಲರಾವ್ ಅಭಿಮತ
ಶಿವಮೊಗ್ಗ ಪ್ರಾದೇಶಿಕ ಕಚೇರಿ ಪರಿಸರ ಅಧಿಕಾರಿ (ಪ್ರಭಾರಿ) ಕೆ. ಶಿಲ್ಪಾ, ಮಹಾಪ್ರಬಂಧಕ (ಈಎAಡಿ) ಡಿ. ಲೋಕೇಶ್ವರ ಇದ್ದರು. ಮುಖ್ಯ ಅತಿಥಿಗಳು ತಮ್ಮ ಭಾಷಾಣದಲ್ಲಿ ಪ್ರತಿಯೊಬ್ಬರೂ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಪರಿಸರದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕು ಮತ್ತು ಈ ಜಗತ್ತನ್ನ ವಾಸಿಸಲು ಇನ್ನಷ್ಟು ಯೋಗ್ಯವನ್ನಾಗಿ ಮಾಡಬೇಕು ಎಂದರು ಕರೆ ನೀಡಿದರು.
ಮಹಾಪ್ರಬಂಧಕರು (ಈಎಂಡಿ) ಅವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿದರು. ಈಎಂಡಿ ವಿಭಾಗದ ಆರ್. ಸತೀಶ್ ವಂದನಾರ್ಪಣೆಯನ್ನು ಮಾಡಿದರು. ಈ ಕಾರ್ಯಕ್ರಮವನ್ನು ಸೈಲ್-ವಿಐಎಸ್‌ಎಲ್’ನ ಪರಿಸರ ನಿರ್ವಹಣಾ ವಿಭಾಗವು ಆಯೋಜಿಸಿತ್ತು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















