ಕಲ್ಪ ಮೀಡಿಯಾ ಹೌಸ್ | ತುಮಕೂರು |
ಲಾರಿ ಟೈರ್ ಸ್ಫೋಟಗೊಂಡು ಚಾಲಕ ಸಾವಿಗೀಡಾಗಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆ.ಬಿ. ಕ್ರಾಸ್ ಬಳಿ ನಡೆದಿದೆ.
ಕೊರಟಗೆರೆ ತಾಲೂಕಿನ ಸೋಂಪುರ ಗ್ರಾಮದ ನಿವಾಸಿ ವೆಂಕಟೇಶ್ (43) ಮೃತ ದುರ್ದೈವಿ. ಇವರು ಲಾರಿ ಓಡಿಸಿಕೊಂಡು ಜೀವನೋಪಾಯ ಮಾಡುತ್ತಿದ್ದರು. ಲಾರಿ ಟೈರ್ ಹೀಟ್ ಆಗಿಆಗಿದ್ದ ಕಾರಣ ಅದನ್ನು ಪರಿಶೀಲಿಸಲು ವೆಂಕಟೇಶ್ ಮುಂದಾಗಿದ್ದಾರೆ. ಈ ವೇಳೆ ಲಾರಿ ಟೈರ್ ಸ್ಫೋಟಗೊಂಡು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















