ಕಲ್ಪ ಮೀಡಿಯಾ ಹೌಸ್ | ಹೈದ್ರಾಬಾದ್ |
ಮ್ಯಾಕ್‌ವುಡ್ ಎಂಟರ್ಟೈನ್ಮೆಂಟ್ ಬ್ಯಾನರ್ ನ ಅಡಿಯಲ್ಲಿ ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ನಿರ್ಮಾಣವಾಗುತ್ತಿರುವ ‘ರುದ್ರಾಕ್ಷಪುರಂ’ ಚಲನಚಿತ್ರದ ತೆಲುಗು ಅವತರಣಿಕೆಯ ಫಸ್ಟ್ ಲುಕ್ ಪೋಸ್ಟರ್‌ನ್ನು ಹಿರಿಯ ಪಂಚಭಾಷಾ ಚಲನಚಿತ್ರ ನಟರಾದ ಸುಮನ್ ಮತ್ತು ಭಾನುಚಂದರ್‌ರವರು ಬಿಡುಗಡೆಗೊಳಿಸಿದರು.
‘ರುದ್ರಾಕ್ಷಪುರಂ’ ಒಂದು ಪವರ್ ಫುಲ್ ಟೈಟಲ್, ಹೆಸರಿನಲ್ಲೇ ಶಕ್ತಿ ಇದೆ . ಇದೊಂದು ಆಕ್ಷನ್ ತ್ರಿಲ್ಲರ್ ಚಿತ್ರ, ಚಿತ್ರದ ಕೆಲವು ತುಣುಕುಗಳನ್ನು ನೋಡಿದೆವು, ತುಂಬಾ ಅದ್ದೂರಿಯಾಗಿ ಮೂಡಿಬಂದಿವೆ ಇದರಲ್ಲಿ ನಟಿಸಿದವರಾರೂ ಹೊಸಬರೆಂದು ತಿಳಿಯಲಿಲ್ಲ. ತ್ರಿಲ್ಲರ್ ಮಂಜುರವರು ಸಾಹಸ ಸನ್ನಿವೇಶಗಳನ್ನು ತುಂಬಾ ಸೊಗಸಾಗಿ ನಿರ್ದೇಶಿಸಿದ್ದಾರೆ. ಈ ಹಿಂದೆ ಆರ್ ಕೆ ಗಾಂಧಿ ನಿರ್ದೇಶನದಲ್ಲಿ
ಪ್ರೇಮಭಿಕ್ಷ ಸಿನಿಮಾ ದಲ್ಲಿ ನಟಿಸಿದ್ದೇನೆ, ಗಾಂಧಿ ಸಿನಿಮಾಗಾಗಿ ಪ್ರಾಣ ಕೊಡಲು ಸಿದ್ಧವಿರುವ ವ್ಯಕ್ತಿ. ರುದ್ರಾಕ್ಷಪುರಂ ಸಿನಿಮಾ ಗಾಂಧಿಯ ಕೆರಿಯರ್ ಬದಲಾಯಿಸುವುದರಲ್ಲಿ ಎರಡು ಮಾತಿಲ್ಲವೆಂದರು. ನಟ ಬಾನುಚಂದರ್ ಮಾತನಾಡುತ್ತಾ ರುದ್ರಾಕ್ಷಪುರಂ ಸಿನಿಮಾದಲ್ಲಿ ನಾನೂ ನಟಿಸಬೇಕಿತ್ತು ಆದರೆ ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಈ ಚಿತ್ರದಲ್ಲಿ ಪಾತ್ರ ಮಾಡಲಾಗಲಿಲ್ಲ.ಆದರೂ ಈ ಚಿತ್ರದ ಪಸ್ಟ್ ಲುಕ್ ಪೋಸ್ಟರ್‌ನ್ನು ಲಾಂಚ್ ಮಾಡುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದರು.
ರುದ್ರಾಕ್ಷಪುರಂ ಸಿನಿಮಾ ನನಗೆ ಅದೃಷ್ಟ ಚಿತ್ರ, ಈ ಚಿತ್ರ ಮುಗಿಯುವುದರೊಳಗೆ ನನಗೆ ಮೆತ್ತೆ ಎರಡು ಚಿತ್ರಗಳು ಸಿಕ್ಕಿವೆ. ಈ ಚಿತ್ರದ ನಾಯಕ ನಟ ಮಣಿ ಸಾಯಿತೇಜ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗದ ಹಲವು ಸುಂದರ ತಾಣಗಳಲ್ಲಿ ಚಿತ್ರೀಕರಣ ಮುಗಿಸಿದ್ದು ಅಂತಿಮ ಹಂತದ ಚಿತ್ರೀಕರಣ ಹೈದ್ರಾಬಾದ್‌ನ ಸುತ್ತಮುತ್ತ ಮತ್ತು ರಾಮೋಜಿರಾವ್ ಫಿಲ್ಮಸಿಟಿಗಳಲ್ಲಿ ಮಾಡಿದ್ದೇವೆ. ಚಿತ್ರ ತುಂಬಾ ಅದ್ದೂರಿಯಾಗಿ ಮೂಡಿಬಂದಿದೆ.. ಫೆಬ್ರುವರಿಯಲ್ಲಿ ತೆರೆಗೆ ತರಲು ಪ್ರಯತ್ನ ಮಾಡುತ್ತಿದ್ದೇವೆ . ಕನ್ನಡ ಮತ್ತು ತಮಿಳು ಚಿತ್ರಗಳ ಫಸ್ಟ್ ಲುಕ್ ಕೂಡ ಶೀಘ್ರದಲ್ಲೇ ಮಾಡುತ್ತಲಿದ್ದು, ಮೂರು ಭಾಷೆಯ ಚಿತ್ರಗಳನ್ನು ಏಕಕಾಲಕ್ಕೆ ಕರ್ನಾಟಕ, ಆಂಧ್ರ, ತೆಲಂಗಾಣ ಮತ್ತು ತಮಿಳುನಾಡಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಚಿತ್ರ ನಿರ್ದೇಶಕ ಆರ್.ಕೆ. ಗಾಂಧಿ ಹೇಳಿದರು.
ಚಿತ್ರಕ್ಕೆ ಎಂ ನಾಗೇಂದ್ರಕುಮಾರ್ ರವರ ಛಾಯಾಗ್ರಹಣ,ಗಂಟಾಡಿ ಕೃಷ್ಣ ,ಎಂ ಎಲ್ ರಾಜ್, ಜಯಸೂರ್ಯ ರವರ ಸಾಹಿತ್ಯ, ಸಂಗೀತ. ತ್ರಿಲ್ಲರ್ ಮಂಜು, ಬಾಜಿ, ಸ್ಟಾರ್ ಮಲ್ಲಿ,ರವರ ಸಾಹಸ, ಆರ್ ಮಲ್ಲಿ ಸಂಕಲನ, ಪಿಆರ್ ಓ ವೀರಬಾಬು, ಡಾ ಪ್ರಭು ಗಂಜಿಹಾಳ ,ಡಾ ವೀರೇಶ್ ಹಂಡಗಿ ಪ್ರಚಾರ ಕಲೆ ಈ ಚಿತ್ರಕ್ಕಿದೆ. ರಾಜೀವ್ ಕೃಷ್ಣ ಗಾಂಧಿ ಅವರು ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಿರುವ ರುದ್ರಾಕ್ಷಪುರಂ ಸಿನಿಮಾದಲ್ಲಿ ಮಣಿಸಾಯಿತೇಜ,ಪವನ್ ವರ್ಮ, ರಾಜೇಶ್ ರೆಡ್ಡಿ, ವೈಢೂರ್ಯ,ರೇಖ, ಅಕ್ಷರ ನಿಹ, ಧೀರಜ್ ಅಪ್ಪಾಜಿ, ಶ್ರೀವಾಣಿ, ಸುರೇಶ್ ಕೊಂಡೇಟಿ, ಶೋಭರಾಜ್,ನಾಗಮಹೇಶ್,ಭಕ್ತರಹಳ್ಳಿ ಮೊದಲಾದವರಿದ್ದಾರೆ.


ವರದಿ: ಡಾ. ಪ್ರಭು ಗಂಜಿಹಾಳ, ಮೊ: 9448775346
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















