ಕಲ್ಪ ಮೀಡಿಯಾ ಹೌಸ್ | ಕುಂದಗೋಳ |
ಕುಂದಗೋಳ ಕಲ್ಯಾಣಪುರ ಮಠಕ್ಕೆ 50 ವರ್ಷ ತುಂಬಿದ ಸುಸಂದರ್ಭದಲ್ಲಿ ಮಠದ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಾಗೂ ಅಭಿನವ ಶ್ರೀಬಸವಣ್ಣಜ್ಜನವರ ಚರಪಟ್ಟಾಧಿಕಾರ ನಿಮಿತ್ಯ ಒಂದು ತಿಂಗಳು ನಡೆಯುವ ಜಾತ್ರಾ ಮಹೋತ್ಸವದಲ್ಲಿ ಇದೆ ತಿಂಗಳು ಜನವರಿ 19ರಂದು ಕರ್ತೃ ಶ್ರೀ ಬಸವಣ್ಣಜ್ಜ ನವರ ಹಾಗೂ ಅಭಿನವ ಶ್ರೀಬಸವಣ್ಣಜ್ಜನವರ ಕೃಪಾಶೀರ್ವಾದಗಳೊಂದಿಗೆ ತಯಾರಾದ ಸಿದ್ದುಕೃಷ್ಣ ಕ್ರಿಯೇಶನ್ಸ್‌ನ ಸಂಶಿ ಅವರ ಶ್ರೀ ಬಸವಂತಪ್ಪ.ಚ. ಹರಕುಣಿ ಅರ್ಪಿಸುವ ಕುಂದಗೋಳ ಕಲ್ಯಾಣಪುರದ ಕರ್ತೃ ಶ್ರೀ ಬಸವಣ್ಣಜ್ಜನವರ ಜೀವನಾಧಾರಿತ ‘ತ್ರಿವಿಧದಾಸೋಹಿ ಶ್ರೀಬಸವಣ್ಣಜ್ಜ’ ಕಿರುಚಿತ್ರ ಬಿಡುಗಡೆ ಆಗಲಿದೆ.
ಈ ಚಿತ್ರದ ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ವಂದೇಮಾತರಮ್ ಮುತ್ತು, ಮೂಲಕಥೆ ಅಭಿನವ ಶ್ರೀಬಸವಣ್ಣಜ್ಜನವರು ರಚಿಸಿದ್ದಾರೆ. ಸಂಭಾಷಣೆ-ಪರಿಕಲ್ಪನೆ ಗೋವಿಂದ್ ಮಾಂಡ್ರೆ. ಸಂಗೀತ ನಿರ್ದೇಶನ ಶ್ರೀರಾಮ್, ವರ್ಣಾಲಂಕಾರ ವಿದ್ಯಾ ಮಾಂಡ್ರೆ. , ವಸ್ತ್ರಾಲಂಕಾರ ಮಂಜುನಾಥ ಹನಸಿಯವರ, ಸಹ ಛಾಯಾಗ್ರಾಹಣ ದಾನೇಶ ಬ.ವಡ್ಡರ, ಸಹ ನಿರ್ದೇಶನ: ಮಂಜುನಾಥ್ ನೆರಕಿಮನಿ. ಸಂಕಲನ ಶ್ರೀನಿವಾಸ್ ಕಲಾಲ್, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಗಿ. ಚಿತ್ರಕಥೆ ನಿರ್ದೇಶನ ಬಸವರಾಜ ಬೀಡನಾಳ ಅವರದಿದ್ದು ನಿರ್ಮಾಪಕರು ಶೇಖರಪ್ಪ ಚ ಹರಕುಣಿ ಆಗಿದ್ದಾರೆ.

ಸಿದ್ದುಕೃಷ್ಣ ಕ್ರಿಯೇಶನ್ಸ್ ಯ್ಯೂಟ್ಯೂಬ್ ಚಾನಲ್ ನಲ್ಲಿ ಈ ಚಿತ್ರವನ್ನು ವಿಕ್ಷೀಸಲು Siddukrishna Creations ಅಂತಾ ಟೈಪ್ ಮಾಡಿ ಚಿತ್ರ ವಿಕ್ಷಿಸಿ ಪ್ರೋತ್ಸಾಹಿಸಿ ತಂಡದ ಎಲ್ಲಾ ಕಲಾವಿದರಿಗೂ ತಂತ್ರಜ್ಞರಿಗೂ ಆಶೀರ್ವಾದಿಸಿ ಎಂದು ನಿರ್ಮಾಪಕ ಶೇಖರಪ್ಪ ಹರಕುಣಿ ಕೋರಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post