ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ವಿಐಎಸ್‌ಎಲ್ ಸಿಲ್ವರ್ ಜ್ಯೂಬಿಲಿ ಸ್ಟೇಡಿಯಂನಲ್ಲಿ ಇಂದು 74ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ವಿಐಎಸ್‌ಎಲ್ ಸೆಕ್ಯುರಿಟಿ, ಹೋಮ್ ಗಾರ್ಡ್ಸ್, ಎನ್.ಸಿ.ಸಿ, ಹೈಸ್ಕೂಲ್ ಮತ್ತು ಪ್ರೈಮರಿ ಸ್ಕೂಲ್ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು.

ವಿಐಎಸ್‌ಎಲ್ ಉದ್ಯೋಗಿಗಳು ಕಳೆದ ವರ್ಷದಲ್ಲಿ ಮಾಡಿದ ವಿಶೇಷ ಸಾಧನೆಗಾಗಿ ವಿಶೇಷ ಪ್ರಶಸ್ತಿ, ಜವಹಾರ್ ನೆಹರು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗಳನ್ನು ವಿತರಿಸಲಾಯಿತು. ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ತಂಡಗಳಿಗೆ ಹಾಗೂ ಎಲ್ಲಾ ಪಥಸಂಚಲನ ತಂಡಗಳಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.

ಸಹಾಯಕ ಮಹಾಪ್ರಬಂಧಕರು (ಹಣಕಾಸು) ಇಳಯರಾಜ ಕಾರ್ಯಕ್ರಮವನ್ನು ನಿರೂಪಿಸಿದರು.










Discussion about this post