ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಚಿತ್ರಟ್ಟೆಹಳ್ಳಿಯಿಂದ ಸಾರೇಕೊಪ್ಪ ಕ್ರಾಸ್ ವರೆಗೆ ಹೊಸದಾದ ಲಿಂಕ್ ಲೈನ್ ಮಾರ್ಗವನ್ನು ನಿರ್ಮಿಸುವ ಕಾಮಗಾರಿ ನಡೆಸಲು ಉದ್ದೇಶಿಸಿರುವುದರಿಂದ ಜ.28ರಿಂದ 30ರವರೆಗೆ 110/11 ಕೆವಿ ವಿ.ವಿ ಕೇಂದ್ರ ಸೊರಬದಿಂದ ವಿದ್ಯುತ್ ಸರಬರಾಜಾಗುವ ಎಫ್-2 ಸಾರೆಕೊಪ್ಪ, ಎಫ್-3 ಬಳ್ಳಿಬೈಲು, ಎಫ್-15 ಕಲ್ಲಂಬಿ, ಈ ಮೂರು ಫೀಡರ್‌ಗಳ ವ್ಯಾಪ್ತಿಗೊಳಪಡುವ ಜಂಗಿನಕೊಪ್ಪ, ಹಳೇಸೊರಬ, ಗೌರಿಕೆರೆಮಠ, ಚಿತ್ರಟ್ಟೆಹಳ್ಳಿ, ಓಟೂರು, ಬಿಳವಗೋಡು, ಕುದರೇಗಣಿ, ತ್ಯಾವಗೋಡು, ಸಾರೇಕೊಪ್ಪ, ಸಾರೇಮರೂರು, ಕಲ್ಲಂಬಿ, ಗುಡವಿ, ಬಳ್ಳಿಬೈಲು, ದುಗ್ಗಿಹೊಸೂರು, ಹುಲೇಮರಡಿ, ಕಂತನಹಳ್ಳಿ ಗ್ರಾಮಗಳಿಗೆ ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ಹಗಲು ಹೊತ್ತಿನ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಜ.29ರಂದು ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಸೊರಬ ಪಟ್ಟಣದಿಂದ ರಾಜೀವನಗರ ಕ್ರಾಸ್ ವರೆಗೆ ಹೊಸದಾದ ಲಿಂಕ್ ಲೈನ್ ಮಾರ್ಗವನ್ನು ನಿರ್ಮಿಸುವ ಕಾಮಗಾರಿ ನಡೆಸಲು ಉದ್ದೇಶಿಸಿರುವುದರಿಂದ ಜ.29ರಂದು 110/11 ಕೆವಿ ವಿವಿ ಕೇಂದ್ರ ಸೊರಬದಿಂದ ವಿದ್ಯುತ್ ಸರಬರಾಜಾಗುವ ಎಫ್-21 ಸೊರಬ ಪಟ್ಟಣ, ಎಫ್-24 ಕರಡಿಗರೆ ಮತ್ತು ಎಫ್-25 ನಡಹಳ್ಳಿ ಫೀಡರ್‌ಗಳ ವ್ಯಾಪ್ತಿಗೊಳಪಡುವ ಸೊರಬ ಪಟ್ಟಣ ಸೇರಿದಂತೆ ಮರೂರು, ನಡಹಳ್ಳಿ, ಜೇಡಿಗೆರೆ, ಚೆಲನೂರು, ಹಾಲಗಟ್ಟಿ, ಕರಡಿಗೆರೆ, ಗುಂಡಶೆಟ್ಟಿಕೊಪ್ಪ, ಯಲಸಿ, ಕಕ್ಕರಿಸಿ, ತಾವರೇಹಳ್ಳಿ, ಜಂಬೇಹಳ್ಳಿ, ಕಂತನಹಳ್ಳಿ, ಚೌಡೀಕೊಪ್ಪ, ಕಡಗದ್ದೆ, ತಂಡಗಿ, ಕೋಣನಮನೆ, ಕಡಸೂರು ಗ್ರಾಮಗಳಿಗೆ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಹಗಲು ಹೊತ್ತಿನ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಈ ಕುರಿತು ಎಂದಿನಂತೆ ಸಾರ್ವಜನಿಕರು ಸಹಕರಿಸಬೇಕಾಗಿ ಕೋರಲಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















