ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ನಿನ್ನೆ ರಾತ್ರಿ ಖಾಸಗಿ ಹಾಸ್ಟೆಲ್’ನಲ್ಲಿ ಊಟ ಸೇವಿಸಿದ ನೂರಕ್ಕೂ ಅಧಿಕ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
ಇಲ್ಲಿನ ಶಕ್ತಿನಗರದ ಖಾಸಗಿ ಹಾಸ್ಟೆಲ್’ವೊಂದಲ್ಲಿನ ವಿದ್ಯಾರ್ಥಿನಿಯರು ನಿನ್ನೆ ರಾತ್ರಿ ಊಟ ಮಾಡಿದ್ದಾರೆ. ಆದರೆ, ಸುಮಾರು 137 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು, ಅವರನ್ನೆಲ್ಲಾ ತಡರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಸ್ವಸ್ಥಗೊಂಡ ವಿದ್ಯಾರ್ಥಿನಿಯರು ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಓದುತ್ತಿದ್ದಾರೆ ಎಂದು ವರದಿಯಾಗಿದೆ.
Also read: ರೈತರ ತಾಳ್ಮೆ ಕೆಡಿಸಬೇಡಿ: ಡಾ.ಜ್ಞಾನೇಶ್ ಎಚ್ಚರಿಕೆ
ತಮ್ಮ ಮಕ್ಕಳು ಅಸ್ವಸ್ಥಗೊಂಡ ವಿಚಾರ ತಿಳಿಯುತ್ತಿದ್ದಂತೆ ಪೋಷಕರು ಆಸ್ಪತ್ರೆ ಮುಂದೆ ದೌಡಾಯಿಸಿದ್ದಾರೆ. ಹಲವು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು, 12 ವಿದ್ಯಾರ್ಥಿನಿಯರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















