ಕಲ್ಪ ಮೀಡಿಯಾ ಹೌಸ್ | ಲಕ್ನೋ |
ತಮ್ಮ ಮಗಳ ಬಳಿ ಪ್ರೆಗ್ನೆನ್ಸಿ ಚೆಕ್ ಮಾಡುವ ಕಿಟ್ ಇರುವುದನ್ನು ಕಂಡ ಪೋಷಕರು ಆಕೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆಕೆಯ ಮೇಲೆ ಪೋಷಕರೇ ಆಸಿಡ್ ಸುರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಅಲಮಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಮ್ಮ ಸಂಬಂಧಿಕರ ಸಹಾಯ ಪಡೆದ ನರೇಶ್ ಹಾಗೂ ಶೋಭಾದೇವಿ ಎಂಬ ದಂಪತಿಗಳು ತಮ್ಮ 21 ವರ್ಷದ ಮಗಳ ಮೇಲೆ ಆಸಿಡ್ ಸುರಿದು ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಮಗಳನ್ನು ಕೊಂದ ಬಳಿಕ ಆಕೆ ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ತನಿಖೆ ಆರಂಭಿಸಿದ ಪೊಲೀಸರು ದಂಪತಿಯನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಸತ್ಯ ಹೊರಬಿದ್ದಿದೆ. ಅವರು ನೀಡಿದ ಮಾಹಿತಿ ಆಧಾರದಲ್ಲಿ ಗ್ರಾಮದ ಹೊರಗಿನ ಕಾಲುವೆಯಿಂದ ವಿರೂಪಗೊಂಡ ಶವವನ್ನು ಹೊರತೆಗೆಯಲಾಗಿದೆ.
Also read: ಮಹಿಳೆಯರೇ ಎಚ್ಚರ! ಬೈಕಿನ ಹಿಂಬದಿಯಲ್ಲಿ ನಿರ್ಲಕ್ಷವಾಗಿ ಕೂರುವ ಮುನ್ನ ಈ ಸುದ್ದಿ ಓದಿ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















