ಕಲ್ಪ ಮೀಡಿಯಾ ಹೌಸ್ | ಟರ್ಕಿ |
ವಿನಾಶಕಾರಿ ಭೂಕಂಪಕ್ಕೆ ಸಿಲುಕಿ ತತ್ತರಿಸಿರುವ ಟರ್ಕಿ ಹಾಗೂ ಸಿರಿಯಾ ದೇಶಕ್ಕೆ ಆಪರೇಷನ್ ದೋಸ್ತ್ ಹೆಸರಿನಲ್ಲಿ ಭಾರತ ನೆರವಿನ ಹಸ್ತ ಚಾಚಿದ್ದು, 23 ಟನ್ ಪರಿಹಾರ ಸಾಮಾಗ್ರಿ ಹೊತ್ತ ಭಾರತದ ಏಳನೇ ವಿಮಾನ ಅದಾನ ವಿಮಾನ ನಿಲ್ದಾಣ ತಲುಪಿದೆ
Turkey | Seventh flight from India delivered relief materials and medical equipment like patient monitors, ECG, syringe pumps and disaster relief materials at Adana airport. #TurkeyEarthquake
(Pic: MEA spox Arindam Bagchi’s twitter handle) pic.twitter.com/5EmTZNTNSh
— ANI (@ANI) February 12, 2023
ಈ ಬಗ್ಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗಚಿ ತಮ್ಮ ಟ್ವೀಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 23 ಟನ್ ಪರಿಹಾರ ಸಾಮಾಗ್ರಿ ಹೊತ್ತ ಭಾರತದ ಏಳನೇ ವಿಮಾನ ಅದಾನ ವಿಮಾನ ನಿಲ್ದಾಣ ತಲುಪಿದ್ದು, ಸ್ಥಳೀಯ ಉಪ ಆಡಳಿತಾಧಿಕಾರಿ ಮೌತಾಜ್ ದೌಹುಜಿ ಡಮಾಸ್ಕಸ್ ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಿದ್ದಾರೆ ಎಂದು ಹೇಳಿದ್ದಾರೆ.
ಏಳನೇ ಆಪರೇಷನ್ ದೋಸ್ತ್ ವಿಮಾನ ಶನಿವಾರ ಉತ್ತರ ಪ್ರದೇಶದ ಗಾಜಿಯಾಬಾದ್ ನ ಹಿಂದನ್ ವಾಯುನೆಲೆಯಿಂದ ಭೂಕಂಪ ಪೀಡಿತ ಸಿರಿಯಾ ಮತ್ತು ಟರ್ಕಿಗೆ ನಿರ್ಗಮಿಸಿತ್ತು. ಭಾರತೀಯ ವಾಯುಪಡೆಯ ಸಿ 17 ವಿಮಾನದಲ್ಲಿ ಪರಿಹಾರ ಸಾಮಾಗ್ರಿಗಳು, ವೈದ್ಯಕೀಯ ನೆರವು, ತುರ್ತು ಆರೈಕೆ ಮೆಡಿಸನ್, ವೈದ್ಯಕೀಯ ಉಪಕರಣಗಳನ್ನು ಸಾಗಿಸಲಾಯಿತು ಎಂದು ಹೇಳಿದ್ದಾರೆ.
ಸಿರಿಯಾಕ್ಕೆ 23 ಟನ್ ಹಾಗೂ ಟರ್ಕಿಗೆ 12 ಟನ್ ಸೇರಿದಂತೆ ಒಟ್ಟಾರೇ 35 ಟನ್ ಪರಿಹಾರ ಸಾಮಾಗ್ರಿ ಸಾಗಿಸಲಾಗಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post