ನಾನು 2017ರಲ್ಲಿಯೇ ವ್ಯಾಸಂಗ ಮಾಡುತ್ತಿರುವಾಗಲೇ ಸೋಲಾರ್ ಆಧಾರಿತ ಭೈಸಿಕಲ್ ಅನ್ವೇಷಣೆ ಮಾಡಿ ನೂರಾರು ಜನರಿಗೆ ಸೋಲಾರ್ ಸೈಕಲ್‌ಗಳು ಸುಲಭವಾಗಿ ದೊರೆಯುವಂತೆ ಮಾಡಿದ್ದೇನೆ. ನನ್ನ ಸಾಧನೆಯನ್ನು ಮೆಚ್ಚಿ ಅನೇಕ ಗಣ್ಯರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ 2014ರಲ್ಲಿ ಶಿವಮೊಗ್ಗದಲ್ಲಿ ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ ಪರಿಸರ ಸಮೃದ್ದಿ ಸಂಘಟನೆಯನ್ನು ಸ್ಥಾಪಿಸಿ ಮನೆಗೊಂದು ಗಿಡ ಶಾಲೆಗೊಂದು ವನ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಸಸಿಗಳನ್ನು ನೆಟ್ಟು ಪೋಷಿಸಿದ್ದಲ್ಲದೆ ನೂರಾರು ಮಕ್ಕಳು ಹಾಗೂ ಯುವಕರನ್ನು ಈ ನಿಟ್ಟಿನಲ್ಲಿ ಜಾಗೃತಿಗೊಳಿಸಿದ್ದೇನೆ ಎಂದರು.
ಜಯಕರ್ನಾಟಕ ಸಂಘಟನೆಯಲ್ಲಿ ಜಿಲ್ಲಾ ಸಂಚಾಲಕನಾಗಿ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದೇನೆ. ಈಗ ನಾನು ತಾಲೂಕಿನಲ್ಲಿ ಜನಸೇವೆ ಮಾಡಬೇಕೆಂಬ ಇಚ್ಛಾಶಕ್ತಿಯಿಂದ ಸರ್ವರಿಗೂ ಸಮಪಾಲು ಸಮಬಾಳು, ಬಡವರ ದಮನಿತರ ನ್ಯಾಯಕ್ಕಾಗಿ ಹೋರಾಟ, ಮಹಿಳೆಯರ ಸಬಲೀಕರಣ ಹಾಗೂ ವಿದ್ಯಾರ್ಥಿಗಳ ಯುವಕರ ಸಮಸ್ಯೆಗಳಿಗೆ ಪರಿಹಾರ. ಪೊಳ್ಳ ನಾಯಕನಾಗಿರದೆ ನಮ್ರ ಜನ ಸೇವಕನಾಗಿರುವುದು. ಸ್ವಾಸ್ಥ ಸಮಾಜಕ್ಕಾಗಿ ಯುವ ಸಮಾಜವನ್ನು ಸಜ್ಜುಗೊಳಿಸುವುದು ಹಾಗೂ ತಾಲ್ಲೂಕಿನ ಜ್ವಲಂತ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಒದಗಿಸಲು ಶ್ರಮಿಸುವುದು ನನ್ನ ಮುಖ್ಯ ಧೈಯಗಳಾಗಿದ್ದು. ತಾಲ್ಲೂಕಿನ ಜನತೆ ನನ್ನನ್ನು ಬೆಂಬಲಿಸಿ ಆರ್ಶಿರ್ವದಿಸಬೇಕಾಗಿ ಮನವಿ ಮಾಡುತ್ತೇನೆ ಎಂದರು.
ವರದಿ: ಮಧುರಾಮ್, ಸೊರಬ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















