ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಫೆ.27ರಂದು ಲೋಕಾರ್ಪಣೆಗೊಳ್ಳಲಿರುವ ನೂತನ ವಿಮಾನ ನಿಲ್ದಾಣಕ್ಕೆ ಇಂದು ಭಾರತೀಯ ವಾಯುಸೇನೆಯ ಎರಡನೆಯ ವಿಮಾನ ಲ್ಯಾಂಡ್ ಆಗಿದ್ದು, ಇದರಲ್ಲಿ ಪ್ರಧಾನಿಯವರ ಕಾರು ಹಾಗೂ ಅವರ ಭದ್ರತಾ ಸಿಬ್ಬಂದಿ ಆಗಮಿಸಿದ್ದಾರೆ.
ಭಾರತೀಯ ವಾಯು ಸೇನೆಗೆ ಸೇರಿದ ವಿಶೇಷ ಕ್ಯಾರಿಯರ್ ವಿಮಾನದಲ್ಲಿ ಪ್ರಧಾನಿಯವರ ಕಾರು, ಭದ್ರತಾ ವಾಹನಗಳು ಹಾಗೂ ಎಸ್’ಪಿಜಿ ಸಿಬ್ಬಂದಿಗಳು ಶಿವಮೊಗ್ಗಕ್ಕೆ ಬಂದಿಳಿದಿದ್ದಾರೆ.
ಒಟ್ಟು ನಾಲ್ಕು ಕಾರುಗಳು ಇಂದು ಆಗಮಿಸಿದ್ದು, ವಿಮಾನ ನಿಲ್ದಾಣದಲ್ಲಿ ಎಸ್’ಪಿಜಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳ ಜೊತೆಯಲ್ಲಿ ಚರ್ಚೆ ನಡೆಸಿದ್ದಾರೆ. ಆನಂತರ ಭದ್ರತಾ ಸಿಬ್ಬಂದಿಗಳು ಶಿವಮೊಗ್ಗಕ್ಕೆ ನಗರಕ್ಕೆ ಆಗಮಿಸಿದ್ದಾರೆ.
ವಿಮಾನ ಕಂಡು ಕೇಕೆ ಹಾಕಿದ ಜನ
ಇನ್ನು, ಶಿವಮೊಗ್ಗದ ಆಗಮಿಸುತ್ತಿದ್ದ ವಾಯು ಸೇನೆಯ ವಿಮಾನ ಭದ್ರಾವತಿ ನಗರದ ಮೇಲೆ ಮಧ್ಯಾಹ್ನದ ವೇಳೆಗೆ ಹಾದು ಹೋಯಿತು. ತೀರಾ ಕಡಿಮೆ ಎತ್ತರದಲ್ಲಿ ಈ ವಿಮಾನ ಹಾರಿದ್ದು ಹಾಗೂ ಇದರ ಶಬ್ದ ಕೇಳಿ ಸಾರ್ವಜನಿಕರು ಕುತೂಹಲದಿಂದ ರಸ್ತೆ ಮೇಲೆ ನಿಂತು ವೀಕ್ಷಿಸಿ, ಕೇಕೆ ಹಾಕಿ ಸಂಭ್ರಮಿಸುತ್ತಿದ್ದ ದೃಶ್ಯ ಕಂಡು ಬಂದಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















