ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ಗೆ ಭದ್ರಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಕೆ.ಸಂಗಮೇಶ್ವರ ಇವರು ಚಾಲನೆ ನೀಡಿದರು.
ಭದ್ರಾವತಿ ಶಾಸಕರ ಗೃಹಕಛೇರಿಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆಯ ಉದ್ಘಾಟನಾ ಕಾರ್ಯಕ್ರಮದ ನಂತರ ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ನಗರಸಭಾ ಸದಸ್ಯರಾದ ಬಿ.ಟಿ.ನಾಗರಾಜ್ ಪ್ರತಿನಿಧಿಸುವ ವಾರ್ಡ್ ನಂ.14 ರ ಮನೆಗಳಿಗೆ ಸಾಂಕೇತಿಕವಾಗಿ ಕಾರ್ಡ್ಗಳನ್ನು ವಿತರಿಸುವ ಮೂಲಕ ಶಾಸಕರು ಚಾಲನೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕರಾದ ಬಿ.ಕೆ. ಸಂಗಮೇಶ್ವರ್ ರವರು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಈ ಸಮಾಜದ ಮಹಿಳೆಯರು, ಬಡವರು, ಕೂಲಿ ಕಾರ್ಮಿಕರ ಬಗ್ಗೆ ಅತಿಯಾದ ಕಾಳಜಿ ಇರುವುದರಿಂದ ಪ್ರತಿ ಮನೆಯ ಗೃಹಿಣಿಗೆ ಮನೆ ನಿರ್ವಾಹಣೆಗಾಗಿ ರೂ.2000, 200 ಯೂನಿಟ್ ಉಚಿತವಾಗಿ ವಿದ್ಯುತ್ ಮತ್ತು 10 ಕೆ.ಜಿ.ಅಕ್ಕಿಯನ್ನು ಉಚಿತವಾಗಿ ಬಡವರಿಗೆ ನೀಡುವ ಸಲುವಾಗಿ ಈ ಗ್ಯಾರಂಟಿ ಕಾರ್ಡ ಬಿಡುಗಡೆ ಮಾಡಿದೆ. ಸಾರ್ವಜನಿಕರು ಈ ಕಾರ್ಡನ್ನು ಪಡೆಯುವ ಮೂಲಕ ಇದರ ಸದುಪಾಯೋಗಪಡಿಸಿಕೊಳ್ಳಲು ಕರೆ ನೀಡಿದರು.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ಭದ್ರಾವತಿ ಗ್ರಾಮಾಂತರ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ರಮೇಶ್ ರವರು ಮಾತನಾಡಿ, ಕಾಂಗ್ರೆಸ್ ಪಕ್ಷದ ಈ ಮಹತ್ವಾಕಾಂಕ್ಷೆ ಯೋಜನೆಯನ್ನು ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ಜನರಿಗೆ ತಲುಪಿಸಿ, ಕಾರ್ಡಿನಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿಯನ್ನು ಮನೆ ಮನೆಗೂ ತಲುಪಿಸುವ ಕೆಲಸವಾಗಬೇಕಿದೆ. ಭದ್ರಾವತಿಯ ಎರಡು ಕಣ್ಣುಗಳಾದ ವಿಐಎಸ್ ಮತ್ತು ಎಂಪಿಎಂ ಮತ್ತೆ ಪುನರುಜ್ಜೀವನಗೊಳ್ಳಬೇಕಾದರೆ ಶಾಸಕರು ಮತ್ತೊಮ್ಮೆ ಆರಿಸಿ ಬರಬೇಕು. ಅವರನ್ನು ಗೆಲ್ಲಿಸುವ ಸಂಕಲ್ಪವನ್ನು ನಾವುಗಳು ಮಾಡಬೇಕೆಂದು ಕಾರ್ಯಕರ್ತರಿಗೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿ. ಚಂದ್ರೇಗೌಡರವ ರು ಮಾತನಾಡಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ಗೃಹಲಕ್ಷ್ಮಿ, ಗೃಹಜ್ಯೋತಿ, ಹಾಗೂ ಅನ್ನಭಾಗ್ಯ ಕಾರ್ಡುಗಳನ್ನು ಇಡೀ ತಾಲ್ಲೂಕಿನಾದ್ಯಾಂತ ಮನೆಮನೆಗೆ ತಲುಪಿಸುವ ಕೆಲಸವನ್ನು ನಮ್ಮ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಅತ್ಯಂತ ಪ್ರಾಮಾಣಿಕವಾಗಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ನಾವು ಮತ್ತು ಶಾಸಕರು ನಿಮ್ಮೊಡನೆ ಹಗಲಿರಳು ಶ್ರಮಿಸಲು ಸಿದ್ದರಿದ್ದೇವೆ ಎಂದ ಗೌಡರು ಗ್ಯಾರಂಟಿ ಕಾರ್ಡನ ಉಪಾಯೋಗದ ಬಗ್ಗೆ ಸವಿಸ್ತಾರವಾಗಿ ಸಭೆಗೆ ಅರುಹಿದರು.
Also read: ಆತ್ಮದಿಂದ ವ್ಯಕ್ತಿಯನ್ನು ಗುರುತಿಸಿ: ನ್ಯಾ. ಮಲ್ಲಿಕಾರ್ಜುನಗೌಡ ಕರೆ
ಈ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷರಾದ ಅನುಸುಧಾ, ಉಪಾಧ್ಯಕ್ಷರಾದ ಚನ್ನಪ್ಪ, ನಗರಸಭಾ ಸದಸ್ಯರು ಪಕ್ಷದ ಮುಖಂಡರುಗಳಾದ ಬಿ.ಕೆ. ಮೋಹನ್, ಬಿ.ಟಿ. ನಾಗರಾಜ್, ಓಬಿಸಿ ನಗರಾಧ್ಯಕ್ಷರಾದ ಗಂಗಾಧರಪ್ಪ, ಪ್ರಚಾರಸಮಿತಿ ಅಧ್ಯಕ್ಷರಾದ ಮಣಿಶೇರ್ಖ, ಕೆಪಿಸಿಸಿ ಸದಸ್ಯರಾದ ಶಿವಪ್ಪ, ಬಿ.ಕೆ. ಗಣೇಶ್, ಯುವ ಕಾಂಗ್ರೆಸ್ ನ ಅಪ್ರಾಭ್ತ್, ನೌಕರರ ವಿಭಾಗದ ರಾಜ್ಯ ಕಾರ್ಯದರ್ಶಿ ಎಂ.ಅನಸೂಯಾ ಮೊದಲಾದವರುಗಳು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















