ಕಲ್ಪ ಮೀಡಿಯಾ ಹೌಸ್ | ಉಡುಪಿ |
ಉಡುಪಿ ಶ್ರೀಕೃಷ್ಣ ಮಠಕ್ಕೆ ಜಾಗವನ್ನು ಮುಸ್ಲೀಮರು ಕೊಟ್ಟಿದ್ದು ಎಂಬ ವಿವಾದಾತ್ಮಕ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ಮಿಥುನ್ ರೈ ನೀಡಿದ್ದಾರೆ.
ಕಾಂಗ್ರೆಸ್’ನಿAದ ಟಿಕೇಟ್ ಆಕಾಂಕ್ಷಿಯಾಗಿರುವ ಮಿಥುನ್ ರೈ ಸಮಾರಂಭವೊAದರಲ್ಲಿ ಮಾತನಾಡಿದ್ದು, ಉಡುಪಿ ಶ್ರೀಕೃಷ್ಣ ಮಠಕ್ಕೆ ಮುಸಲ್ಮಾನರು ಜಾಗ ಕೊಟ್ಟಿದ್ದರು ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಸೃಷ್ಠಿಸಿದ್ದಾರೆ.
ಈ ಹೇಳಿಕೆಗೆ ಈಗ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಮಿಥುನ್ ರೈ ಅವರ ಮುಂಬರುವ ಚುನಾವಣೆಯಲ್ಲಿ ಈ ಹೇಳಿಕೆ ಕರಾವಳಿಯಲ್ಲಿ ಕಾಂಗ್ರೆಸ್’ಗೆ ಪೆಟ್ಟು ಕೊಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಸಿ.ಟಿ. ರವಿ ಟಕ್ಕರ್
ಇನ್ನು, ಮಿಥುನ್ ರೈ ಹೇಳಿಕೆಗೆ ಬಿಜೆಪಿ ಮುಖಂಡ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.
ಈಗ ಕೃಷ್ಣ ಮಠಕ್ಕೆ ಜಾಗ ಕೊಟ್ಟವರು ಮುಸ್ಲೀಮರು ಎಂದಿರುವ ಕಾಂಗ್ರೆಸ್ಸಿಗರು ಭಾರತ ಎಂದು ಹೆಸರಿಟ್ಟಿದ್ದು ಮುಸ್ಲೀಮರು ಎಂದರೂ ಆಶ್ಚರ್ಯವಿಲ್ಲ. ಕೃಷ್ಣ ಮಠ ಮಾತ್ರವಲ್ಲ ಅಯೋಧ್ಯೆ ರಾಮಮಂದಿರ, ಕಾಶಿ ವಿಶ್ವನಾಥ ದೇವಾಲಯವನ್ನು ನಿರ್ಮಿಸಿದ್ದೂ ಸಹ ಮುಸ್ಲೀಮರೇ ಎಂದು ಹೇಳಿದರೂ ಅದರಲ್ಲೇನು ವಿಶೇಷವಿಲ್ಲ. ಸುಳ್ಳನ್ನು ಸತ್ಯದಂತೆ ಹೇಳುವುದು ಕಾಂಗ್ರೆಸ್’ಗೆ ಹಾಗೂ ಅವರ ನಾಯಕರಿಗೆ ಅಂಟಿರುವ ಕಾಯಿಲೆ ಎಂದು ಟೀಕಿಸಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















