ಕಲ್ಪ ಮೀಡಿಯಾ ಹೌಸ್ | ಲಕ್ನೋ |
ತನ್ನ ಅಕ್ರಮ ಪ್ರೀತಿಗಾಗಿ ತಾನು ಜನ್ಮಕೊಟ್ಟ ಮಕ್ಕಳನ್ನೇ ತಾಯಿಯೊಬ್ಬಳು ಅಮಾನುಷವಾಗಿ ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಮೀರತ್’ನಲ್ಲಿ ಘಟನೆ ನಡೆದಿದ್ದು, ಮಹಿಳೆ ಹಾಗೂ ಅಲ್ಲಿನ ಸ್ಥಳೀಯ ಕೌನ್ಸಿಲರ್ ಸೌದ್ ಪರಸ್ಪರ ಪ್ರೀತಿಸುತ್ತಿದ್ದರು. ಹೀಗಾಗಿ ಇದಕ್ಕೆ ತೊಂದರೆಯಾದ ಕಾರಣ ಮಹಿಳೆ ಪ್ರೇಮಿಯ ಜೊತೆ ಸೇರಿ ತನ್ನ 10 ವರ್ಷದ ಮಗ ಹಾಗೂ 6 ವರ್ಷದ ಮಗಳನ್ನು ಕೊಂದು ಬಳಿಕ ಶವಗಳನ್ನು ಕಾಲುವೆಗೆ ಎಸೆದಿದ್ದಾರೆ. ಅಲ್ಲದೇ ಮಕ್ಕಳ ಹತ್ಯೆಯಲ್ಲಿ ನೆರೆಮನೆಯವರೂ ಭಾಗಿಯಾಗಿದ್ದು, ಇಲ್ಲಿಯವರೆಗೆ ಆರು ಜನರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಮಗಳನ್ನು ತನ್ನ ಮನೆಯಲ್ಲಿ ಕೊಂದು, ಮಗನನ್ನು ಪಕ್ಕದ ಮನೆಯಲ್ಲಿ ಕೊಲೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಮೂವರು ಮಹಿಳೆಯರು ಹಾಗೂ ಮೂವರು ಪುರುಷರು ಭಾಗಿಯಾಗಿದ್ದಾರೆ. ಪ್ರಕರಣ ಮುಚ್ಚಿಡಲು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದ ವೇಳೆ ಪೊಲೀಸರು ತನಿಖೆ ನಡೆಸಿದ್ದು, ಈ ವೇಳೆ ನಿಜಾಂಶ ಬೆಳಕಿಗೆ ಬಂದಿದೆ.
Also read: ಬೆಳಗಾವಿ ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬೆದರಿಕೆ ಕರೆ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















