ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ಸುತ್ತೂರು ಶ್ರೀಕ್ಷೇತ್ರದ ಜೆಎಸ್‍ಎಸ್ ಶಾಲೆಗೆ ಮತ್ತು ಉಚಿತ ವಿದ್ಯಾರ್ಥಿ ನಿಲಯದ 2023-24ನೇ ಸಾಲಿನ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕನ್ನಡ ಮಾಧ್ಯಮಕ್ಕೆ 1 ರಿಂದ 8ನೇ ತರಗತಿವರೆಗೆ ಮತ್ತು ಇಂಗ್ಲೀಷ್ ಮಾಧ್ಯಮಕ್ಕೆ 1, 2, 5 ಹಾಗೂ 8ನೇ ತರಗತಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಗ್ರಾಮಾಂತರ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಬಾಲಕ ಹಾಗೂ ಬಾಲಕಿಯರಿಗೆ ಪ್ರವೇಶ ನೀಡಲಾಗುವುದು.
ಅರ್ಜಿಯನ್ನು ಶಾಲಾ ಕಚೇರಿಯಲ್ಲಿ ಖುದ್ದಾಗಿ ಪಡೆಯಬಹುದು ಅಥವಾ www.jssschoolsuttur.org ಹಾಗೂ www.jssonline.org ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು. ದೂರವಾಣಿಯಲ್ಲಿ ಸಂಪರ್ಕಿಸಿದರೆ ವ್ಯಾಟ್ಸ್‍ಪ್ ಮೂಲಕವೂ ಅರ್ಜಿ ನಮೂನೆಯನ್ನು ಕಳುಹಿಸಿಕೊಡಲಾಗುವುದು. ಅಂಚೆ ಮುಖಾಂತರ ಅರ್ಜಿ ಪಡೆಯಲು ಇಚ್ಛಿಸುವವರು, ವಿದ್ಯಾರ್ಥಿಯು ಪ್ರವೇಶ ಬಯಸುವ ತರಗತಿಯ ವಿವರ ಹಾಗೂ ಸ್ವ-ವಿಳಾಸವುಳ್ಳ 5 ರೂ.ಗಳ ಪೋಸ್ಟಲ್ ಸ್ಟ್ಯಾಂಪ್ ಹಚ್ಚಿದ ಲಕೋಟೆಯನ್ನು ಆಡಳಿತಾಧಿಕಾರಿಗಳು, ಜೆಎಸ್‍ಎಸ್ ಸಂಸ್ಥೆಗಳು, ಸುತ್ತೂರು-571129, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ. ಈ ವಿಳಾಸಕ್ಕೆ ಕಳುಹಿಸಿ ಪಡೆಯಬಹುದು.
Also read: ಎಸ್’ಪಿ ಮಿಥುನ್ ಕುಮಾರ್ ಮಿಂಚಿನ ಸಂಚಾರ: ತಡರಾತ್ರಿ ಚೆಕ್ ಪೋಸ್ಟ್’ಗಳಲ್ಲಿ ಪರಿಶೀಲನೆ
ಭರ್ತಿ ಮಾಡಿದ ಅರ್ಜಿಗಳನ್ನು ಮೇ 13 ರೊಳಗಾಗಿ ಸಲ್ಲಿಸಬೇಕು. ಅರ್ಜಿಯ ಜೊತೆಗೆ ಹಿಂದಿನ ತರಗತಿಯ ಅಂಕಪಟ್ಟಿ, ಭಾವಚಿತ್ರ, ವಿದ್ಯಾರ್ಥಿ ಮತ್ತು ಪೋಷಕರ ಆಧಾರ್‍ಕಾರ್ಡ್, ರೇಷನ್‍ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಅಂಚೆ ಮುಖಾಂತರ ಆಡಳಿತಾಧಿಕಾರಿಗಳು, ಜೆಎಸ್‍ಎಸ್ ಸಂಸ್ಥೆಗಳು, ಸುತ್ತೂರು-571129, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ ಈ ವಿಳಾಸಕ್ಕೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮೊ.7411486938 (ವ್ಯಾಟ್ಸ್‍ಪ್ ನಂ), ಹಿರಿಯ ಪ್ರಾಥಮಿಕ ಶಾಲೆ ದೂ.08221-232054, ಪ್ರೌಢಶಾಲೆ ದೂ.08221-232653, ಬಸವೇಶ್ವರ ವಿದ್ಯಾರ್ಥಿನಿಲಯ ದೂ.08221-232332, ಸಂಯೋಜನಾಧಿಕಾರಿಗಳ ಕಚೇರಿ ದೂ.08221-232217 ಗೆ ಸಂಪರ್ಕಿಸಿ ವಿವರ ಪಡೆಯಬಹುದಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















