ಕಲ್ಪ ಮೀಡಿಯಾ ಹೌಸ್ | ಉಡುಪಿ |
ಈ ಬಾರಿ ಟಿಕೇಟ್ ತಪ್ಪಿರುವುದಕ್ಕೆ ನನಗೆ ಯಾವುದೇ ಬೇಸರ ಇಲ್ಲದಿದ್ದರೂ, ಪಕ್ಷ ನನ್ನನ್ನು ನಡೆಸಿಕೊಂಡು ರೀತಿಯಿಂದ ನನಗೆ ನೋವಾಗಿದೆ ಎಂದು ಶಾಸಕ ಕೆ. ರಘುಪತಿ ಭಟ್ ಭಾವುಕರಾಗಿ ಕಣ್ಣೀರಿಟ್ಟು ಮಾತನಾಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ನನಗೆ ಟಿಕೇಟ್ ದೊರೆಯಲಿಲ್ಲ ಎಂಬುದು ಟಿವಿ ಮಾಧ್ಯಮಗಳಿಂದ ತಿಳಿಯಿತು. ಯಾವ ನಾಯಕರೂ ನನಗೆ ಕರೆ ಮಾಡಲಿಲ್ಲ. ಕಡೇ ಪಕ್ಷ ಜಿಲ್ಲಾಧ್ಯಕ್ಷರೂ ಸಹ ನನಗೆ ಕರೆ ಮಾಡಿ ತಿಳಿಸಲಿಲ್ಲ. ಇದು ಪಕ್ಷದ ನಿರ್ಧಾರವನ್ನು ನಾನು ತಿಳಿದುಕೊಳ್ಳಬೇಕಾದ ರೀತಿಯೇ ಎಂದು ಬೇಸರ ವ್ಯಕ್ತಪಡಿಸಿದರು.
ನನಗೆ ಟಿಕೆಟ್ ಸಿಗಲ್ಲ ಎನ್ನುವ ಬಗ್ಗೆ ಕನಸು ಮನಸ್ಸಿನಲ್ಲಿ ಊಹೆ ಮಾಡಿರಲಿಲ್ಲ. ಜಾತಿಯ ಕಾರಣಕ್ಕೆ ಬದಲಾವಣೆ ಮಾಡುತ್ತಾರೆ ಎನ್ನುವ ಆಲೋಚನೆ ಇರಲಿಲ್ಲ. ಇದನ್ನು ನಾನು ಇದಕ್ಕೆ ಒಪ್ಪುವುದಿಲ್ಲ. ಪಕ್ಷದ ನಾಯಕತ್ವ, ಮೋದಿಯ ಬಗ್ಗೆ ಬೇಸರವಿಲ್ಲ. ನಾನು ಪಾರ್ಟಿಗೆ ಇಷ್ಟು ಬೇಡವಾದೆವೋ? ನನ್ನನ್ನು ಕೇಳಿ ಮಾಡುತ್ತಿದ್ದರೆ ನಾನೇ ರಾಜೀನಾಮೆ ಕೊಡುತ್ತಿದ್ದೆ ಎಂದರು.
ಇಂದು ಪಕ್ಷ ಎತ್ತರಕ್ಕೆ ಬೆಳೆದಿದೆ. ಹಾಗಾಗಿ ಪಕ್ಷಕ್ಕೆ ನಾವೀಗ ಬೇಕಾಗಿಲ್ಲ. ಕರಾವಳಿ ಜಿಲ್ಲೆಗಳಲ್ಲಿ ಪಕ್ಷಕ್ಕಾಗಿ ಅವಿರತವಾಗಿ ದುಡಿದಿದ್ದೇನೆ. ಸದ್ಯ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿ ನಾನಿಲ್ಲ. ನಿನ್ನೆ ನಸುಕಿನವರೆಗೂ ಕಾರ್ಯಕರ್ತರು ನನಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿಚಾರಿಸುತ್ತಿದ್ದರು. ಇನ್ನು ಮುಂದೆಯೂ ಕಾರ್ಯಕರ್ತರ ಕಷ್ಟಕ್ಕೆ ನಾನು ಇರುತ್ತೇನೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post