ಕಲ್ಪ ಮೀಡಿಯಾ ಹೌಸ್ | ಹೈದರಾಬಾದ್ |
ಹಲವು ವರ್ಷಗಳಿಂದ ಚಿತ್ರರಂಗದಿAದ ದೂರ ಉಳಿದಿದ್ದ ಖ್ಯಾತ ನಟಿ ಇಲಿಯಾನ Iliana ಈಗ ಮತ್ತೆ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದು, ಮದುವೆಯಾಗದೇ ನನಗೆ ಆಗುತ್ತಿದೆ ಎಂದು ಹೇಳುವ ಮೂಲಕ ಸಂಚಲನ ಸೃಷ್ಠಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಎರಡು ಫೋಟೋ ಶೇರ್ ಮಾಡಿರುವ ಇಲಿಯಾನ, ಇನ್ನೂ ಮದುವೆ ಆಗಿಲ್ಲ. ಆದರೂ, ತಾಯಿ ಆಗ್ತಿದ್ದೀನಿ. ತಾವು ತಾಯಿ ಆಗುತ್ತಿರುವ ಮತ್ತು ಮಗುವಿಗಾಗಿ ಕಾಯುತ್ತಿದ್ದೇನೆ ಎಂದು ಬರಹವನ್ನೂ ಬರೆದಿದ್ದಾರೆ.
ಪೋಸ್ಟ್ ಮಾಡಲಾದ ಫೋಟೋದಲ್ಲಿ ಚಿಕ್ಕದೊಂದು ಟೀ ಶರ್ಟ್ ಹಾಗೂ ಕುತ್ತಿಗೆಯಲ್ಲಿ ಮಾಮಾ ಎನ್ನುವ ಲಾಕೆಟ್ ಇದೆ. ಆ ಟೀ ಶರ್ಟ್ ನಲ್ಲಿ ಅಂಡ್ ಸೋ ದಿ ಅಡ್ವೆಂಚರ್ ಬಿಗಿನ್ಸ್ ಎನ್ನುವ ಬರಹವಿದೆ.
Also read: ಎ.25ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ?
ಇಲಿಯಾನ ನಿಜವಾಗಿಯೂ ಗರ್ಭಿಣಿಯಾ ಅಥವಾ ಯಾವುದಾದರೂ ಸಿನಿಮಾದ ಪ್ರಮೋಷನ್ ಗೆ ಈ ರೀತಿ ಪೋಸ್ಟ್ ಮಾಡಿರಬಹುದಾ ಎನ್ನುವ ಅನುಮಾನ ಕೂಡ ಮೂಡಿದೆ. ಸದ್ಯದಲ್ಲೇ ಈ ಎಲ್ಲ ಅನುಮಾನಗಳಿಗೆ ಅವರೇ ತೆರೆ ಎಳೆಯಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post