ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಿನ್ನೆ ರಾತ್ರಿ ನಗರದಲ್ಲಿ ನಡೆದ ವಿನಯ್ ಕುಮಾರ್ ಎಂಬಾತನ ಹತ್ಯೆ ಪ್ರಕರಣವನ್ನು 24 ಗಂಟೆಗಳಲ್ಲಿ ಬೇಧಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನುಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಹಿನ್ನೆಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಹೊಸಮನೆ ಪೊಲೀಸರು ಸಾದತ್ ಮತ್ತು ಸುಹೈಲ್ ಅಲಿಯಾಸ್ ಕೊಲವೆರಿ ಎನ್ನುವವರನ್ನು ಬಂಧಿಸಿದ್ದಾರೆ.
ಯಾಕಾಗಿ ಹತ್ಯೆ?
ಹತ್ಯೆಯಾದ ನವೀನ್ ಹಾಗೂ ಅರುಣ್ ಎರಡು ಮೊಬೈಲ್’ಗಳನ್ನು ಕದ್ದಿದ್ದರಂತೆ. ಇದರಲ್ಲಿ ಒಂದು ಮೊಬೈಲನ್ನು ಸುಹೇಲ್’ಗೆ ಮಾರಿದ್ದು, ಆತ ಹಣವನ್ನು ಬಾಕಿ ಉಳಿಸಿಕೊಂಡಿದ್ದಾನೆ. ಬಾಕಿ ಹಣವನ್ನು ನಿನ್ನೆ ಕೇಳಲು ಬಂದ ವೇಳೆ ಜಗಳವಾಗಿದೆ. ಈ ಜಗಳ ವಿಕೋಪಕ್ಕೆ ತಿರುಗಿ, ಸಾದತ್ ಹಾಗೂ ಸುಹೇಲ್ ಇಬ್ಬರೂ ನವೀನ್’ಗೆ ಚಾಕುವಿನಿಂದ ಬೆನ್ನಿಗೆ ಇರಿದು ಪರಾರಿಯಾಗಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ನವೀನ್’ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾನೆ.
Also read: ದ್ವಿತೀಯ ಪಿಯುಸಿ: ಶಿವಮೊಗ್ಗದ ಪ್ರತಿಷ್ಠಿತ ಪೇಸ್ ಕಾಲೇಜಿಗೆ ಶೇ.99.5ರಷ್ಟು ಫಲಿತಾಂಶ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post