ಕಲ್ಪ ಮೀಡಿಯಾ ಹೌಸ್ | ವಿಜಯನಗರ |
ವಿಜಯನಗರಕ್ಕೆ ಕೃಷ್ಣದೇವರಾಯರ ಮಾದರಿಯಲ್ಲಿ ಆಡಳಿತ ಬೇಕಿದ್ದು, ನನಗೆ ಇನ್ನೊಂದು ಅವಕಾಶ ನೀಡಿದರೆ ಅಭಿವೃದ್ಧಿ ಮಾಡಿ ತೋರಿಸುವೆ ಎಂದು ಸಚಿವ ಆನಂದ್ ಸಿಂಗ್ Anand Singh ಹೇಳಿದ್ದಾರೆ.
ಹೊಸಪೇಟೆಯ ಪಟೇಲ್ ನಗರದಲ್ಲಿರುವ ಬಿಜೆಪಿ ಕಚೇರಿಯ ಆವರಣದಲ್ಲಿ ತ್ರಿಮತಸ್ತ ಬ್ರಾಹ್ಮಣ ಸಮಾಜದವರ ಜೊತೆ ಸಮಾಲೋಚನೆ ಸಭೆಯನ್ನು ಆಯೋಜಿಸಿ ಅವರು ಮಾತನಾಡಿದರು.
ಬ್ರಾಹ್ಮಣ ಸಮಾಜದ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಿ, ತಮ್ಮ ಸಮುದಾಯಕ್ಕೆ ಅಗತ್ಯ ಸೌಕರ್ಯ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಸಚಿವರು ತಮ್ಮ 15 ವರ್ಷದ ಕಾಲಾವಧಿಯಲ್ಲಿ ಮಾಡಲಾದ ಸ್ಲಾಗನೀಯ ಜನಪರ ಕೆಲಸಗಳನ್ನು ತಿಳಿಸಿ, ಮುಂದಿನ ಯೋಜನೆಯನ್ನು ತಿಳಿಸಿ ಬ್ರಾಹ್ಮಣ ಸಮಾಜದ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಿದರು.
ಸಿದ್ಧಾರ್ಥ ಸಿಂಗ್ Siddarth Singh ಅವರು ಮಾತನಾಡಿ, ಮುಂದಿನ ಅವರ ಯೋಜನೆ, ಕನಸುಗಳನ್ನು ತಮ್ನ ಭಾಷಣದಲ್ಲಿ ತಿಳಿಸುತ್ತಾ ಬುದ್ದಿಜೀವಿಗಳಾದ ತಮ್ಮ ಸಮುದಾಯಕ್ಕೆ ಇವುಗಳನ್ನು ತಿಳಿಸುವುದು ಬೇಕಾಗಿಲ್ಲ. ಆದರೂ ನನ್ನ ಕರ್ತವ್ಯ ಎಲ್ಲಾ ವಿಚಾರ ತಿಳಿಸಿರುವೆ. ಬಿಜೆಪಿಗೆ ಮತ್ತೊಂದು ಅವಕಾಶ ನೀಡಿ ಇತಿಹಾಸದಲ್ಲಿ ಬೆರೆಯುವ ಹಾಗೆ ನಮ್ಮ ವಿಜಯನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡಿ ತೋರಿಸುವೆ ಎಂದು ತಿಳಿಸಿದರು.
ಅನಂದ್ ಸಿಂಗ್ ಅವರು, ಬ್ರಾಹ್ಮಣ ಸಮಾಜದ ಮುಖಂಡರು ಹೊಸಪೇಟೆ ಹುಡಾ ಅದ್ಯಕ್ಷ ಅಶೋಕ್ ಜಿರೆ ಮತ್ತು ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ ಸಿಂಗ್ ಭಾಗವಹಿಸಿ ಸುಮಾರು ಒಂದು ಘಂಟೆಗಳ ಕಾಲ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮುಕ್ತ ಸಮಾಲೋಚನೆ ಮಾಡಿದರು.
ಬ್ರಾಹ್ಮಣ ಸಮಾಜದ ಮುಖಂಡರುಗಳಾದ ಹನುಮಂತರಾವ್, ಉದ್ಯೋಗ್ ಪೆಟ್ರೋಲ್ ಬಂಕ್ ಮಾಲಿಕರು ಮತ್ತು ಸಮಾಜ ಸೇವಕರಾದ ಶ್ರೀನಿವಾಸ್, ದಿವಾಕರ್, ಹೆಸರಾಂತ ನ್ಯಾಯವಾದಿಗಳಾದ ಸಿನಂಭಟ್, ಶ್ರೀ ರಾಘವೇಂದ್ರ ಡೆಕೋರೇಟರ್ಸ್ ಮಾಲಿಕರಾದ ಅಪ್ಪಣ್ಣ, ನ್ಯಾಯವಾದಿ ಕಲಂಭಟ್, ಅನೇಕ ಮುಖಂಡರು, ಮಹಿಳಾ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮದ ಬ್ರಾಹ್ಮಣ ಸದಸ್ಯರು, ಕಿರ್ಲೋಸ್ಕರ್, ಬಿಎಂಎಂ, ಎಸ್’ಎಲ್’ಆರ್ ಕಾರ್ಖಾನೆಯ ಬ್ರಾಹ್ಮಣ ಉದ್ಯೋಗಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಅಶೋಕ ಜಿರೆ ಮತ್ತು ಹನುಮಂತರಾವ್ ಅವರು ಬ್ರಾಹ್ಮಣ ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿ ಸಮಾಜದ ಅಭಿವೃದ್ಧಿ ಅನಿವಾರ್ಯ ಕಾರಣ ಬ್ರಾಹ್ಮಣರಲ್ಲಿ ಅನೇಕ ಬಡತನ ಕುಟುಂಬದವರು ಇರುತ್ತಾರೆ. ಕಾರಣ ಅವರು ಆರ್ಥಿಕವಾಗಿ ಕಡು ಬಡತನದಲ್ಲಿ ಇದ್ದು ಉತ್ತಮ ವಿದ್ಯಾಭ್ಯಾಸ ಮಾಡಿರುತ್ತಾರೆ. ಇಂದಿನ ಮೀಸಲಾತಿ ಪದ್ದತಿಯಲ್ಲಿ ಅವರಿಗೆ ಸೀಟುಗಳು ಸಿಗುತ್ತಿಲ್ಲ. ಕಾರಣ ಈ ವ್ಯವಸ್ಥೆ ಸರಿಯಾಗಬೇಕಾಗಿದೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು. ಅಡುಗೆ ಸಂಘದ ಸದಸ್ಯರು ಮನವಿ ಪತ್ರ ನೀಡಿ ತಮ್ಮ ಸಮಸ್ಯೆಗಳನ್ನು ತಿಳಿಸಿದರು.
ಹೊಸಪೇಟೆ ಬ್ರಾಹ್ಮಣ ಸಮಾಜ ಮತ್ತು ಅಡುಗೆ ಸಂಘದ ಎಲ್ಲಾ ಸದಸ್ಯರು ಸಿದ್ದಾರ್ಥ್ ಸಿಂಗ್ ಗೆ ಸನ್ಮಾನಿಸಲಾಯಿತು.
(ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post