ಕಲ್ಪ ಮೀಡಿಯಾ ಹೌಸ್ | ಬಳ್ಳಾರಿ |
ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಅಗತ್ಯ ಸೇವೆಗಳ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಒದಗಿಸಲಾಗಿದ್ದ ವಿಶೇಷ ಮತದಾನ ವ್ಯವಸ್ಥೆಯಲ್ಲಿ ಮೇ 04 ರವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು, ಎರಡನೇ ದಿನ ಬುಧವಾರದಂದು ಜಿಲ್ಲೆಯ ಪೊಲೀಸ್ ಇಲಾಖೆ, ಗೃಹ ರಕ್ಷಕ ದಳದ ನೌಕರರು ಸೇರಿ ಒಟ್ಟು 1,451 ಮತದಾರರು ತಮ್ಮ ಮತವನ್ನು ಚಲಾಯಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
ಕ್ಷೇತ್ರವಾರು ಮತದಾನ ವಿವರ:
91-ಕಂಪ್ಲಿ ವಿಧಾನಸಭಾ ಕ್ಷೇತ್ರ: ಕಂಪ್ಲಿ ಕ್ಷೇತ್ರದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯ ಪೊಲೀಸ್ ಸಿಬ್ಬಂದಿ 29, ಗೃಹ ರಕ್ಷಕದಳ ಸಿಬ್ಬಂದಿ 5, ಸಿರುಗುಪ್ಪ ಪೊಲೀಸ್ ಉಪ ಅಧೀಕ್ಷಕರ ಕಚೇರಿಯ ಪೊಲೀಸ್ ಸಿಬ್ಬಂದಿ 7, ತೋರಣಗಲ್ಲು ಪೊಲೀಸ್ ಉಪ ಅಧೀಕ್ಷಕರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 7 ಗೃಹ ರಕ್ಷಕದಳ ಸಿಬ್ಬಂದಿ, 16 ಪೊಲೀಸ್ ಇಲಾಖೆ ಸಿಬ್ಬಂದಿ ಮತ್ತು ಕ್ಷೇತ್ರ ಚುನಾವಣಾಧಿಕಾರಿಗಳ ಕಚೇರಿಯಲ್ಲಿನ ಫ್ಯಾಸಿಲಿಟೈಜೇಶನ್ ಕೇಂದ್ರದಲ್ಲಿ 177 ಸೇರಿ 241 ಮತದಾರರು ಮತದಾನ ಮಾಡಿದ್ದಾರೆ.

93-ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ:
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯ ಪೊಲೀಸ್ ಸಿಬ್ಬಂದಿ 95, ಗೃಹ ರಕ್ಷಕದಳ ಸಿಬ್ಬಂದಿ 138, ಸಿರುಗುಪ್ಪ ಪೊಲೀಸ್ ಉಪ ಅಧೀಕ್ಷಕರ ಕಚೇರಿಯ ಪೊಲೀಸ್ ಸಿಬ್ಬಂದಿ 2 ಹಾಗೂ ತೋರಣಗಲ್ಲು ಪೊಲೀಸ್ ಉಪ ಅಧೀಕ್ಷಕರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 5 ಪೊಲೀಸ್ ಇಲಾಖೆ ಸಿಬ್ಬಂದಿ, ಗೃಹ ರಕ್ಷಕದಳ ಸಿಬ್ಬಂದಿ 12 ಮತ್ತು ಕ್ಷೇತ್ರ ಚುನಾವಣಾಧಿಕಾರಿಗಳ ಕಚೇರಿಯಲ್ಲಿನ ಫ್ಯಾಸಿಲಿಟೈಜೇಶನ್ ಕೇಂದ್ರದಲ್ಲಿ 128 ಸೇರಿ 380 ಮತದಾರರು ಮತದಾನ ಮಾಡಿದ್ದಾರೆ.

Also read: ಕೋಳಿಮೊಟ್ಟೆ ತಿನ್ನಲು ಹೋಗಿ ಬಂಧಿಯಾದ ನಾಗರಹಾವು
95-ಸಂಡೂರು ವಿಧಾನಸಭಾ ಕ್ಷೇತ್ರ: ಸಂಡೂರು ಕ್ಷೇತ್ರದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯ ಪೊಲೀಸ್ ಸಿಬ್ಬಂದಿ 7, ಸಿರುಗುಪ್ಪ ಪೊಲೀಸ್ ಉಪ ಅಧೀಕ್ಷಕರ ಕಚೇರಿಯ ಪೊಲೀಸ್ ಸಿಬ್ಬಂದಿ 1 ಹಾಗೂ ತೋರಣಗಲ್ಲು ಪೊಲೀಸ್ ಉಪ ಅಧೀಕ್ಷಕರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 18 ಪೊಲೀಸ್ ಇಲಾಖೆ ಸಿಬ್ಬಂದಿ, ಗೃಹ ರಕ್ಷಕದಳ ಸಿಬ್ಬಂದಿ 58 ಮತ್ತು ಕ್ಷೇತ್ರ ಚುನಾವಣಾಧಿಕಾರಿಗಳ ಕಚೇರಿಯಲ್ಲಿನ ಫ್ಯಾಸಿಲಿಟೈಜೇಶನ್ ಕೇಂದ್ರದಲ್ಲಿ 22 ಸೇರಿ 106 ಮತದಾರರು ಮತದಾನ ಮಾಡಿದ್ದಾರೆ.











Discussion about this post