ಕಲ್ಪ ಮೀಡಿಯಾ ಹೌಸ್ | ಸ್ಯಾಂಡಲ್‌ವುಡ್ |
ಕನ್ನಡದ ಫೇಮಸ್ ಯೂಟ್ಯೂಬರ್ ಡಾ. ಬ್ರೊ Dr. Bro ಚಿತ್ರವೊಂದಕ್ಕೆ ಹಿನ್ನೆಲೆ ಧ್ವನಿ ನೀಡುವ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಅವರ ‘ಡೇರ್ ಡೆವಿಲ್ ಮುಸ್ತಾಫಾ ಕಥೆಯನ್ನು ಅದೇ ಹೆಸರಿನಲ್ಲಿ ಸಿನಿಮಾ ತೆರೆಯ ಮೇಲೆ ತರಲಾಗುತ್ತಿದ್ದು, ಹೊಸಬರೇ ಮಾಡಿರುವ ಈ ಪ್ರಯತ್ನಕ್ಕೆ ಡಾ ಬ್ರೋ ಬೆಂಬಲ ನೀಡಿದ್ದು, ಯೂಟ್ಯೂಬರ್ ಡಾ ಬ್ರೊ ಅಭಿಮಾನಿಗಳಿಗೆ ಇದು ನಿಜಕ್ಕೂ ಸಿಹಿಸುದ್ದಿಯಾಗಿದೆ.
ಸದ್ಯ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಡಾಲಿ ಪಿಕ್ಚರ್ಸ್ ವತಿಯಿಂದ ಪ್ರೆಸೆಂಟ್ ಮಾಡಲಾಗುತ್ತಿರುವ ಈ ಸಿನಿಮಾದ ಟ್ರೈಲರ್‌ನಲ್ಲಿ ಪಾತ್ರಗಳ ಪರಿಚಯ, ಸ್ಥಳದ ಪರಿಚಯ ಹಾಗೂ ಕಥೆ ಬಗ್ಗೆ ಡಾ ಬ್ರೋ ಹಿನ್ನೆಲೆ ಧ್ವನಿ ನೀಡಿದ್ದಾರೆ. ಮೂರು ನಿಮಿಷದ ಟ್ರೈಲರ್‌ನಲ್ಲಿ ಹಲವು ಭಾರಿ ಡಾ ಬ್ರೋ ಧ್ವನಿ ಕೇಳಿ ಬರುತ್ತದೆ.
ಪೂರ್ಣಚಂದ್ರ ತೇಜಸ್ವಿಯವರ ಡೇರ್ ಡೆವಿಲ್ ಮುಸ್ತಾಫಾ ಕಥೆಯನ್ನು ಆಧುನಿಕ ಸಿನಿಮಾ ವ್ಯಾಕರಣಕ್ಕೆ ಒಗ್ಗುವಂತೆ ಕಮರ್ಷಿಯಲ್ ಮಾದರಿಯಲ್ಲಿಯೇ ನಿರ್ದೇಶಕ ಶಶಾಂಕ್ ಸೋಗಲ್ ಸೊಗಸಾಗಿ ಕಟ್ಟಿದ್ದಾರೆ. ರೆಟ್ರೊ ಮಾದರಿಯ ಕಥೆಯನ್ನು ಆಹ್ಲಾದಕರ ರೀತಿಯಲ್ಲಿ ತೆರೆಗೆ ತಂದಿರುವ ಕುರುಹು ಟ್ರೈಲರ್‌ನಲ್ಲಿ ಎದ್ದು ಕಾಣುತ್ತಿದ್ದು, ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾದ ಟ್ರೈಲರ್ ಎಲ್ಲರ ಗಮನ ಸೆಳೆಯುತ್ತಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















