ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
2022-23ನೆಯ ಸಾಲಿನ ಎಸ್’ಎಸ್’ಎಲ್’ಸಿ ಫಲಿತಾಂಶ ಪ್ರಕಟಗೊಂಡಿದ್ದು, ಶೇ.96.80ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಚಿತ್ರದುರ್ಗ ಮೊದಲ ಸ್ಥಾನ ಪಡೆದಿದ್ದರೆ, ಯಾದಗಿರಿ ಕೊನೆಯ ಸ್ಥಾನ ಪಡೆದುಕೊಂಡಿದೆ.
ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಖ್ಯಸ್ಥರು ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ್ದು, ಎಂದಿನಂತೆ ಈ ಬಾರಿಯೂ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆದಿದ್ದವು. ಒಟ್ಟು ರಾಜ್ಯದ 15,498 ಪ್ರೌಢಶಾಲೆಗಳ 8.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. ಇವರಲ್ಲಿ 7,00,619 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಬೆಳಗ್ಗೆ 11 ಗಂಟೆಯ ನಂತರ karresults.nic.in / kseab.karnataka.gov.in ಜಾಲತಾಣದಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಹೀಗಿದೆ ಫಲಿತಾಂಶದ ಹೈಲೆಟ್ಸ್:
- ಈ ಬಾರಿ ಶೇ.83.89 ರಷ್ಟು ಫಲಿತಾಂಶ ದಾಖಲು
- ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ.12ರಷ್ಟು ಫಲಿತಾಂಶ ಏರಿಕೆ
- 7,00,619 ವಿದ್ಯಾರ್ಥಿಗಳು ಉತ್ತೀರ್ಣ
- ಶೇ.96.80ರಷ್ಟು ಫಲಿತಾಂಶದ ಮೂಲಕ ಚಿತ್ರದುರ್ಗ ಪ್ರಥಮ
- ಶೇ.96.74 ರಷ್ಟು ಫಲಿತಾಂಶದ ಮೂಲಕ ಮಂಡ್ಯ ದ್ವಿತೀಯ
- ಹಾಸನ ಮೂರನೆಯ ಸ್ಥಾನ
- ನಾಲ್ಕು ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಗಳಿಕೆ
- ಗ್ರಾಮೀಣ ಭಾಗದಲ್ಲಿ ಶೇ.87ರಷ್ಟು ಫಲಿತಾಂಶ
- ಸರ್ಕಾರಿ ಶಾಲೆಗಳಲ್ಲಿ ಶೇ. 86.74ರಷ್ಟು ಫಲಿತಾಂಶ
- ನಗರ ಪ್ರದೇಶದಲ್ಲಿ ಶೇ.79.62ರಷ್ಟು ಫಲಿತಾಂಶ
- ಶೇ.100ರಷ್ಟು ಫಲಿತಾಂಶ ದಾಖಲಿಸಿದ 1517 ಸರ್ಕಾರಿ ಶಾಲೆಗಳು
- ಯಾವುದೇ ಸರ್ಕಾರಿ ಶಾಲೆಯಲ್ಲಿ ಶೂನ್ಯ ಫಲಿತಾಂಶ ಇಲ್ಲ
- 34 ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶೂನ್ಯ ಫಲಿತಾಂಶ
- ಅನುದಾನ ರಹಿತ ಶಾಲೆಗಳಲ್ಲಿ ಶೇ.90.89 ಫಲಿತಾಂಶ
- ಅನುದಾನಿತ ಶಾಲೆಯಲ್ಲಿ ಶೇ.85.64 ಫಲಿತಾಂಶ
- ಕನ್ನಡದಲ್ಲಿ 14,983 ವಿದ್ಯಾರ್ಥಿಗಳು 125 ಅಂಕ ಗಳಿಕೆ
Discussion about this post