ಕಲ್ಪ ಮೀಡಿಯಾ ಹೌಸ್ | ಸಾಗರ |
ಚುನಾವಣೆಯಲ್ಲಿ ಮತ ಹಾಕಲು ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಿದ್ದ ಕಾರು ಚನ್ನಗಿರಿ ಹೆಬ್ಬಲಗೆರೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬುಧವಾರ ನಡೆದಿದೆ.
ಚೆನ್ನಗಿರಿ ತಾಲೂಕಿನ ಹೆಬ್ಬಲಗೆರೆಯ ರಾಷ್ಟ್ರೀಯ ಹೆದ್ದಾರಿ ಬಳಿ ಈ ಘಟನೆ ನಡೆದಿದ್ದು, ಹೋಟೆಲ್ ಗ್ರೀನ್ ಎಂಬಾಸ್ಸಿ ಹಾಗೂ SGT ಕಂಪನಿಯ ಮಾಲೀಕರಾದ ಹಾಜಿ ಸಯ್ಯದ್ ಇಕ್ಬಾಲ್ ಸಾಹೇಬರ ಮಕ್ಕಳಾದ ಸೈಯದ್ ಝಹೂರ್, ಸೈಯದ್ ನಯಾಝ್ ಮತ್ತು ನಯಾಝ್‌ರ ಪತ್ನಿ ಸುನೈನಾ ಎಂದು ತಿಳಿದು ಬಂದಿದೆ.
ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚೆನ್ನಗಿರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆಗೆ ಸಂಬಂದಿಸಿದಂತೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Also read: ಸ್ಟ್ರಾಂಗ್ ರೂಂನಲ್ಲಿ ಮತಯಂತ್ರಗಳು ಭದ್ರ: ಸಿಆರ್’ಪಿಎಫ್ ಯೋಧರು, ಪೊಲೀಸ್ ಸರ್ಪಗಾವಲು


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















