ಕಲ್ಪ ಮೀಡಿಯಾ ಹೌಸ್ | ಕಲಬುರಗಿ |
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶೇಠ ಶಂಕರಲಾಲ ಲಾಹೋಇ ಕಾನೂನು ಮಹಾವಿದ್ಯಾಲಯ ಕಲಬುರಗಿ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಇಸಿಒ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನ ಅಂಗವಾಗಿ ಎಸ್‌ಎಸ್‌ಎಲ್ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಶಿಬಿರಾರ್ಥಿಗಳಿಂದ ಮಹಾವಿದ್ಯಾಲಯದ ಆವರಣದಲ್ಲಿ ಗಿಡ ಬೆಳೆಸಿ ನಾಡು ಉಳಿಸಿ ಎಂಬ ಧ್ಯೇಯದೊಂದಿಗೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರುಗಳಾದ ಮಹೇಶ್ವರಿ ಹಿರೇಮಠ, ಶಾಂತೇಶ್ವರಿ ಶಾಂತಗಿರಿ, ಕರುಣಾ ಪಾಟೀಲ್, ರೇಣುಕಾ ದೇವರಮನಿ, ಜ್ಯೋತಿ ಹಂಗರ್ಕಿ ಉಪಸ್ಥಿತರಿದ್ದರು.

Also read: ಅತಿಯಾದ ರಾಸಾಯನಿಕ ಔಷಧ ಸೇವನೆಯಿಂದ ಜೀವಿಗಳ ಸಂತತಿಗೆ ಹಾನಿ: ಅಮಿತ್ ಹೆಗಡೆ











Discussion about this post