ಕಲ್ಪ ಮೀಡಿಯಾ ಹೌಸ್ | ಉಡುಪಿ |
ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವೀಡಿಯೋ ಮಾಡಿರುವ ಪ್ರಕರಣದಲ್ಲಿ ಸಾಕ್ಷಿ ದೊರೆಯದಿದ್ದರೆ ಚಾರ್ಜ್ ಶೀಟ್ ಸಲ್ಲಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗದ National Commission for Womens ಸದಸ್ಯೆ ಖುಷ್ಬೂ ಸುಂದರ್ Khushbu Sundar ಹೇಳಿದ್ದಾರೆ.
ವೀಡಿಯೋ ಪ್ರಕರಣದ ತನಿಖೆಗಾಗಿ ಉಡುಪಿಗೆ ಭೇಟಿ ನೀಡಿರುವ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ತನಿಖೆಯನ್ನು ಸರಿಯಾದ ಮಾರ್ಗದಲ್ಲಿ ನಡೆಸುವುದು ನಮ್ಮ ಉದ್ದೇಶ. ಅದೇ ವೇಳೆ ನಮಗೆ ಮಹಿಳೆಯರಿಗೆ ನ್ಯಾಯ ದೊರಕಿಸುವುದು ಮುಖ್ಯವೇ ಹೊರತು ಯಾವುದೇ ಒಂದು ಸಮುದಾಯದ ಮಹಿಳೆ ಎಂಬ ಕಾರಣದಿಂದ ನ್ಯಾಯ ದೊರಕಿಸುವುದು ಅಲ್ಲ ಎಂದಿದ್ದಾರೆ.
ಯಾವುದೇ ರಾಜಕೀಯ ಹಾಗೂ ಕೋಮುಗಳ ಒತ್ತಡವಿಲ್ಲದೇ ತನಿಖೆ ನಡೆಸಲಿದ್ದೇವೆ. ಯಾವುದೇ ಸುಮೋಟೋ ಪ್ರಕರಣ ದಾಖಲಿಸಲು ಈವರೆಗೂ ನಿರ್ಧಾರ ಕೈಗೊಂಡಿಲ್ಲ. ಈ ಪ್ರಕರಣದಲ್ಲಿ ಹಲವು ಆಯಾಮಗಳಲ್ಲಿ ತನಿಖೆಯಾಗಬೇಕಿದೆ ಎಂದಿದ್ದಾರೆ.
ಪೊಲೀಸರು ಸುಮಾರು 40 ಗಂಟೆಗಳ ಕಾಲ ಮೊಬೈಲ್ ರಿಟ್ರೀವ್ ಮಾಡಲು ಪ್ರಯತ್ನಿಸಿದರೂ ಯಾವುದೇ ಸಾಕ್ಷಿ ದೊರೆತಿಲ್ಲ. ನಮಗೂ ಸಹ ಯಾವುದೇ ವೀಡಿಯೋಗಳ ವಿದ್ಯಾರ್ಥಿನಿಯರ ಮೊಬೈಲ್’ನಲ್ಲಿ ದೊರೆತಿಲ್ಲ. ಹೀಗಾಗಿ, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್ ಕಳುಹಿಸಿ ರಿಟ್ರೀವ್ ಮಾಡುವ ಪ್ರಯತ್ನ ಮಾಡಬೇಕಿದೆ. ಒಂದು ವೇಳೆ ಸಾಕ್ಷಿ ದೊರೆಯದೇ ಇದ್ದರೆ ಚಾರ್ಜ್ ಶೀಟ್ ಸಲ್ಲಿಸಲು ಸಾಧ್ಯವಿಲ್ಲ. ಯಾವುದಕ್ಕೂ ಈಗಲೇ ನಾವೇ ನ್ಯಾಯಾಧೀಶರಾಗಿ ತೀರ್ಪು ನೀಡುವ ಅಗತ್ಯವಿಲ್ಲ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post