ಕಲ್ಪ ಮೀಡಿಯಾ ಹೌಸ್ | ಕಾರ್ಗಿಲ್ |
ಆಗಸ್ಟ್ 15 ರಂದು ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು 24ನೇ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಕಾರ್ಗಿಲ್ ಯುದ್ಧದಲ್ಲಿ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಜೀವ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ನಮನ “ಸಲಾಮ್ ಸೋಲ್ಜರ್ಸ್” ಶೀರ್ಷಿಕೆಯಡಿಯಲ್ಲಿ, ಯುವಕರೇ ದೇಶ ಸೇವೆಗೆ ಒಂದಾಗಿ, ಸೇನೆ ಸೇರಲು ಮುಂದಾಗಿ ಕುರಿತು ಜಾಗೃತಿಗಾಗಿ ಬೆಂಗಳೂರು ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಡಾ.ಮೋಹನ್ ಕುಮಾರ್ ದಾನಪ್ಪ ಲಡಾಖ್ ನ ಕಾರ್ಗಿಲ್ ನಲ್ಲಿ ಬಲಗೈನಲ್ಲಿ ರಾಷ್ಟ್ರಧ್ವಜ ಹಿಡಿದು ಕಾರ್ಗಿಲ್ ನಗರದಿಂದ ಕಾರ್ಗಿಲ್ ಯುದ್ದ ಸ್ಮಾರಕದವರೆಗೂ ಸತತ 5 ಗಂಟೆಗಳ ಕಾಲ ತಡೆರಹಿತ ವಿನೂತನ ಮ್ಯಾರಾಥಾನ್ ಓಟವನ್ನು ನಡೆಸುವ ಮೂಲಕ ಜಾಗೃತಿ ಮೂಡಿಸಿ ಜನತೆಯ ಗಮನ ಸೆಳೆದರು.
ಭಾರತ ಸೇನೆಯ ರಾಂಕ್ ಹವಾಲ್ದಾರ್ ಆನಂದ್ ಕಂಚಗಾರ್ ರವರು ಧ್ವಜ ನೀಡುವ ಮೂಲಕ ಮ್ಯಾರಾಥಾನ್ ಗೆ ಚಾಲನೆ ನೀಡಿದರು. ಕಾರ್ಗಿಲ್ ನಗರದಿಂದ ಕಾರ್ಗಿಲ್ ನಗರದಿಂದ ಹರ್ದಾಸ್, ಚನಿ ಗೌನ್ಡ್, ಕಾಖಾಸರ್, ಖಾರ್ಬ್ಸ್, ಕಾಕ್ಸರ್, ಥಾಸ್ಗಮ್, ಸೋಮತ್, ಮುಖಾಂತರ ಕಾರ್ಗಿಲ್ ಯುದ್ದ ಸ್ಮಾರಕಕ್ಕೆ ತಲುಪಿದರು, ನಂತರ ಕರ್ನಲ್ ಪುನೀತ್ ಕಠಾರಿಯಾರವರು ಸ್ವಾಗತಿಸಿ ಸೇನೆಯ ಟೋಪಿ (ಕ್ಯಾಪ್) ತೊಡಿಸಿ ಪ್ರಶಂಸಿಸಿದರು.

Also read: ಕುವೆಂಪು ವಿವಿ ಪ್ರಭಾರ ಕುಲಪತಿಯಾಗಿ ಪ್ರೊ. ಎಸ್. ವೆಂಕಟೇಶ್ ಅಧಿಕಾರ ಸ್ವೀಕಾರ
ಕರ್ನಾಟಕದಿಂದ 3150 ಕಿ.ಮೀ ದೂರದಲ್ಲಿರುವ ಕೇಂದ್ರಾಡಳಿತ ಪ್ರದೇಶದ ಲಡಾಖ್ ನ ಕಾರ್ಗಿಲ್ ಗೆ ಆಗಮಿಸಿ ಸಮುದ್ರ ಮಟ್ಟಕ್ಕಿಂತ 10.800 ಅಡಿಗಳಷ್ಟು ಎತ್ತರವಿರುವ ಪ್ರದೇಶದಲ್ಲಿ ಸತತ 5 ಗಂಟೆಗಳ ಕಾಲ ರಾಷ್ಟ್ರಧ್ವಜ ಹಿಡಿದು 42 ಕಿಲೋ ಮೀಟರು ಓಟ ಓಡಿದ್ದು ಕರ್ನಾಟಕದಿಂದ ಪ್ರಥಮ ಪ್ರಯತ್ನವೆಂದು ಹರ್ಷಿಸಿದರು.

ಇದೆ ಸಂಧರ್ಭದಲ್ಲಿ ತಮ್ಮ ಮ್ಯಾರಥಾನ್ ಓಟಕ್ಕೆ ಸೇನೆ ಮತ್ತು ಪೊಲೀಸ್ ಭದ್ರತೆ ಹಾಗೂ ತುರ್ತು ಚಿಕಿತ್ಸೆಗೆ ಆಂಬುಲೆನ್ಸ್ ನೀಡಿ ಸಹಕರಿಸಿದ ಕಾರ್ಗಿಲ್ ಜಿಲ್ಲೆ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಕಾರ್ಗಿಲ್ ಮತ್ತು ದ್ರಾಸ್ ನಗರ ಪೊಲೀಸ್ ಠಾಣೆಯವರಿಗೆ ಹಾಗೂ ತಮ್ಮ ನೆರವಿಗಿದ್ದ ಎನ್. ಸೈಯ್ಯದ್ ವಾರೀಶ್ ಮತ್ತು ಮನೋಜ್ ಕುಮಾರ್ ದಾನಪ್ಪಗೆ ಧನ್ಯವಾದಗಳನ್ನ ಅರ್ಪಿಸಿದರು,












Discussion about this post