ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಿರೀಕ್ಷೆಯಂತೆ ವಿಐಎಸ್’ಎಲ್ ಕಾರ್ಖಾನೆಯ VISL ಎನ್’ಆರ್’ಎಂ ಘಟಕದಲ್ಲಿ ಉತ್ಪಾದನೆ ಇಂದು ಆರಂಭಗೊಂಡಿದ್ದು, ಕಾರ್ಮಿಕರಲ್ಲಿ ಸಂತಸ ಮನೆ ಮಾಡಿದೆ.
ಕಾರ್ಖಾನೆಯ ಎನ್’ಆರ್’ಎಂ ಘಟಕದಲ್ಲಿ ಇಂದು ಮುಂಜಾನೆ ಪೂಜೆ ಸಲ್ಲಿಸಿ ಉತ್ಪಾದನೆಯನ್ನು ಆರಂಭಿಸಲಾಯಿತು. ಇಡಿ ಚಾಂದ್ವಾನಿ ಅವರು ಸ್ಥಳದಲ್ಲಿ ಉಪಸ್ಥಿತರಿದ್ದು, ಪರಿಶೀಲನೆ ನಡೆಸಿದರು. ಕಾರ್ಮಿಕರೊಂದಿಗೆ ಮಾತನಾಡಿದ ಅವರು, ಸುರಕ್ಷಿತವಾಗಿ ಕೆಲಸ ಮಾಡುವಂತೆ ತಿಳಿಸಿದರು.
ಆರು ದಿನಗಳ ಹಿಂದೆ ಉಕ್ಕು ಪ್ರಾಧಿಕಾರದ ಬಿಲಾಯ್ ಘಟಕದಿಂದ ಕಾರ್ಖಾನೆಗೆ 19 ವ್ಯಾಗನ್’ಗಳಲ್ಲಿ ಬ್ಲೂಮ್’ಗಳು ಕಾರ್ಖಾನೆಗೆ ಬಂದಿದ್ದವು. ಇದರ ಹಿನ್ನೆಲೆಯಲ್ಲಿ ಇಂದು ಎನ್’ಆರ್’ಎಂ ಘಟಕ ಆರಂಭಗೊಂಡಿದೆ.
Also read: Seedfund amounting to 25cr dedicated to nurturing startups specializing in Deeptech & AI
ಕಾರ್ಖಾನೆಯಲ್ಲಿ ಇಂದು ಉತ್ಪಾದನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕಾರ್ಮಿಕರಲ್ಲಿ ಸಂತಸ ಮನೆ ಮಾಡಿದ್ದು, ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಉತ್ಪಾದನೆ ಆರಂಭವಾದ ಫೋಟೋ ಹಾಗೂ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊAಡು ಸಂಭ್ರಮಿಸುತ್ತಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















