ಕಲ್ಪ ಮೀಡಿಯಾ ಹೌಸ್ | ಪಡುಬಿದ್ರಿ |
ಬಸ್ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರ್ಕಳದ ನಿವಾಸಿಯೊಬ್ಬರು ದುರ್ಮರಣವನ್ನಪ್ಪಿರುವ ಘಟನೆ ನಡೆದಿದೆ.
ನಂದಿಕೂರು ಮುದರಂಗಡಿ ಜಂಕ್ಷನ್’ನಲ್ಲಿ ಇಂದು ಮುಂಜಾನೆ ಘಟನೆ ನಡೆದಿದ್ದು, ಮೃತ ಸವಾರನನ್ನು ಕಾರ್ಕಳ ಅಜೆಕಾರು ನಿವಾಸಿ ಅಶ್ವಿತ್ ಎಂದು ಗುರುತಿಸಲಾಗಿದೆ.

ಅಪಘಾತದ ರಭಸಕ್ಕೆ ಅಶ್ವಿತ್ ಅವರ ದೇಹವು ಬಸ್ ಮೈನ್ ಆಕ್ಸಿಲ್ ನಲ್ಲಿ ಸಿಲುಕಿಕೊಂಡಿದ್ದು, ಬಸ್ ನ ಹಿಂದಕ್ಕೆ ಚಲಾಯಿಸಿ ಅಶ್ವಿತ್ ದೇಹವನ್ನು ಹೊರತೆಗೆಲಾಗಿತ್ತು.
ಅಶ್ವಿತ್ ಶೆಟ್ಟಿ ಅವರು ಯೂಟ್ಯೂಬರ್ ಆಗಿದ್ದು, ಇತ್ತೀಚೆಗೆ ಬೈಕ್’ನಲ್ಲಿ ಲಡಾಖ್ ಹೋಗಿ ಬಂದಿದ್ದರು.
Also read: ಖಾಸಗಿಯಾಗಿ ಪೋರ್ನ್ ವೀಡಿಯೋ ನೋಡುವುದು ಅಪರಾಧವಲ್ಲ: ಕೇರಳ ಹೈಕೋರ್ಟ್


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















