ಕಲ್ಪ ಮೀಡಿಯಾ ಹೌಸ್ | ಮೂಡಿಗೆರೆ |
ಇಲ್ಲಿನ ಪುಚ್ಚೆಮೊಗೇರಿ ಪ್ರದೇಶದ ಗಣಪತಿ ಕಟ್ಟೆಯಲ್ಲಿ ಅನ್ಯಧರ್ಮದ ಹಸಿರು ಧ್ವಜವನ್ನು ಕಿಡಿಗೇಡಿಗಳು ಇರಿಸಿದ್ದು, ದಕ್ಷ ಪೊಲೀಸ್ ಅಧಿಕಾರಿಯ ಖಡಕ್ ಕಾರ್ಯಾಚರಣೆಯಿಂದ ಸಂಭವನೀಯ ಗಲಭೆ ತಪ್ಪಿದಂತಾಗಿದೆ.
ಇಲ್ಲಿನ ಗಣಪತಿ ಕಟ್ಟೆಯಲ್ಲಿ ಈದ್ ಮಿಲಾದ್ ಸಂದರ್ಭದಲ್ಲಿ ಶಾಂತಿ ಕದಡುವ ಉz್ದೆÃಶದಿಂದ ಕಿಡಿಗೇಡಿಗಳು ಅನ್ಯಧರ್ಮದ ಹಸಿರು ಧ್ವಜವನ್ನು ಇರಿಸಿದ್ದರು.
ಈ ವಿಷಯ ತಿಳಿದು ತತಕ್ಷಣ ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್’ಪೆಕ್ಟರ್ ಸಂದೇಶ್ ಅವರು ಇದನ್ನು ಇರಿಸಲು ಅನುಮತಿ ಪಡೆದಿದ್ದಾರೆಯೇ ಎಂದು ಪಿಡಿಒ ಅವರನ್ನು ಪ್ರಶ್ನಿಸಿದ್ದಾರೆ. ಆದರೆ, ಇದಕ್ಕೆ ಸರಿಯಾಗಿ ಉತ್ತರಿಸಿದ ಪಿಡಿಒಗೆ ಪೊಲೀಸ್ ಅಧಿಕಾರಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಧ್ವಜವನ್ನು ಇರಿಸಿರುವ ವಿಚಾರವನ್ನು ಸಾರ್ವಜನಿಕರು ಪಿಡಿಒಗೆ ತಿಳಿಸಿದ್ದರು. ಆದರೆ, ಅದನ್ನು ನಿರ್ಲಕ್ಷಿಸಿದ ಪಿಡಿಒಗೆ ಅಧಿಕಾರಿ ಸಂದೇಶ್ ಅವರು ಸಾರ್ವಜನಿಕರ ಎದುರಿಗೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಅನುಮತಿ ಪಡೆದಿಲ್ಲ ಎಂದು ತಿಳಿದಾಕ್ಷಣ ಇದನ್ನು ಯಾಕೆ ತೆರವು ಮಾಡಿಲ್ಲ. ಅದಕ್ಕೂ ಮೊದಲು ಅನುಮತಿ ಪಡೆದಿಲ್ಲ ಎಂದಾಕ್ಷಣ ಪೊಲೀಸರಿಗೆ ದೂರು ನೀಡಬೇಕಿತ್ತು. ಯಾವುದನ್ನೂ ಮಾಡಲಿಲ್ಲ ಎಂದ ಮೇಲೆ ಯಾತಕ್ಕಾಗಿ ಪಿಡಿಒ ಆಗಿದ್ದಿಯಾ? ಪ್ರಕರಣದಲ್ಲಿ ನಿನ್ನನ್ನೇ ಯಾಕೆ ಆರೋಪಿಯನ್ನಾಗಿ ಮಾಡಬಾರದು ಎಂದು ಕಿಡಿ ಕಾರಿದ್ದಾರೆ.
ಕೊನೆಯಲ್ಲಿ ಸಂದೇಶ್ ಅವರು ಹಸಿರು ಧ್ವಜವನ್ನು ತೆರವುಗೊಳಿಸಿ, ಸಂಭವನೀಯ ಗಲಭೆಯನ್ನು ತಪ್ಪಿಸಿದ್ದಾರೆ. ಸಂದೇಶ್ ಅವರ ಖಡಕ್ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















