ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಇರುವ ಪಟ್ಟಣದಲ್ಲಿ ದಸರಾ ಉತ್ಸವವನ್ನು ಅದ್ಭುತವಾಗಿ ಆಚರಿಸುತ್ತಿರುವುದು ಶ್ಲಾಘನೀಯ ವಿಷಯವಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಸ್. ಮಂಜಪ್ಪ ಹೇಳಿದರು.
ಎಲ್ಲಾ ಸಮುದಾಯದವರು ಒಗ್ಗೂಡಿ ನೂರಾರು ವರ್ಷಗಳಿಂದ ಬನ್ನಿ ಮುಡಿಯುವ ಪದ್ಧತಿಯನ್ನು ನಡೆಸಿಕೊಂಡು ಬಂದಿದ್ದಾರೆ. ಕಳೆದ ಸುಮಾರು 15 ವರ್ಷಗಳಿಂದ ಸಾರ್ವಜನಿಕವಾಗಿ ದಸರಾ ಉತ್ಸವವನ್ನು ಆಚರಿಸುತ್ತಾ, ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ಸದಾ ತಾವು ಪ್ರೋತ್ಸಾಹ ಮತ್ತು ಸಹಕಾರ ನೀಡುವುದಾಗಿ ತಿಳಿಸಿದರು.
Also read: ಕೈಗೆಟುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆಯಲು ಮಣಿಪಾಲ ಆರೋಗ್ಯ ಕಾರ್ಡ್ ಪಡೆಯಿರಿ: ಮೋಹನ ಶೆಟ್ಟಿ
ವೀರಶೈವ ಸಮಾಜದ ಟೌನ್ ಅಧ್ಯಕ್ಷ ಎಚ್. ಮಲ್ಲಿಕಾರ್ಜುನ ನಿಜಗುಣ ಮಾತನಾಡಿ, ಶ್ರೀ ರಂಗನಾಥ ದೇವಸ್ಥಾನ ನಿರ್ಮಾಣದ ಹಿಂದೆ ಐತಿಹ್ಯ ಇದೆ. ಜೊತೆಗೆ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯುವ ಬಯಲು ಬಸವೇಶ್ವರ ದೇವಸ್ಥಾನಕ್ಕೂ ಸುಮಾರು ನಾಲ್ಕು ಶತಮಾನದ ಇತಿಹಾಸ ಇದೆ ಎನ್ನಲಾಗುತ್ತಿದೆ. ದಸರಾ ಉತ್ಸವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವುದು ಪಟ್ಟಣಕ್ಕೆ ಶೋಭೆ ತಂದಿ ದೆ ಎಂದರು.

ವರದಿ: ಮಧುರಾಮ್, ಸೊರಬ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















