ಕಲ್ಪ ಮೀಡಿಯಾ ಹೌಸ್ | ಸೊರಬ |
ಉತ್ತಮ ಆರೋಗ್ಯ ಒಂದು ಸಂಪತ್ತು. ಒಳ್ಳೆಯ ಆರೋಗ್ಯಕ್ಕಿಂತ ಮತ್ತೊಂದು ಭಾಗ್ಯವಿಲ್ಲ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವೈದ್ಯ ಸಾಹಿತಿ ಡಾ. ಎಂ.ಕೆ. ಭಟ್ ಹೇಳಿದರು.
ದೇಶದ ಸಮೃದ್ಧಿಯಲ್ಲಿ ಪರಿಸರದ ಕೊಡುಗೆ ಅಪಾರವಾದುದು. ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಸರ್ವರನ್ನು ಸಮಾನತೆಯಿಂದ ಕಾಣುವ ದೇಶ ಭಾರತ. ಪ್ರತಿಯೊಬ್ಬರಿಗೂ ಇಲ್ಲಿ ಉಜ್ವಲ ಭವಿಷ್ಯವಿದೆ. ಇಷ್ಟೊಂದು ಭವ್ಯ ಭವಿಷ್ಯತ್ತನ್ನು ಹೊಂದಿದ ದೇಶದಲ್ಲಿ ಜೀವಿಸುತ್ತಿರುವ ನಾವೇ ಧನ್ಯರು ಎಂದರು.
ಗ್ರಾಮೀಣ ಜನರಿಗೆ ಆರೋಗ್ಯದ ಅರಿವು ಅಗತ್ಯವಿದೆ. ಅಪಾಯಕಾರಿ ಸನ್ನಿವೇಶದಲ್ಲಿ ಪ್ರಾಣಪಾಯದಿಂದ ಪಾರಾಗಲು ಪ್ರಥಮ ಚಿಕಿತ್ಸೆಯ ವಿಧಾನಗಳನ್ನು ತಿಳಿದಿರಬೇಕು . ನಾಯಿ ಕಚ್ಚಿದರೆ ಮತ್ತು ನಾಗರ ಹಾವಿನಂತಹ ವಿಷ ಜಂತುಗಳು ಕಚ್ಚಿದರೆ ಪ್ರಥಮ ಚಿಕಿತ್ಸೆಯಾಗಿ ನಿರ್ವಹಿಸುವ ತಂತ್ರಗಾರಿಕೆಯನ್ನು ವಿವರಿಸಿದರು.
ಉಪನ್ಯಾಸ ಪೂರ್ವದಲ್ಲಿ ಉದ್ದೇಶಿತ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರದ ಅಂಗವಾಗಿ ಚಿಕ್ಕಮಾಕೊಪ್ಪ ಮತ್ತು ನೆರೆಯ ಗ್ರಾಮಗಳ ನೂರಕ್ಕೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಸವರಾಜ್ ಹೆಚ್.ಎನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಡಾ. ಉಮೇಶ್ ಭದ್ರಾಪುರ ಆರೋಗ್ಯ ಶಿಬಿರ ಮತ್ತು ಸಭಾ ಕಾರ್ಯಕ್ರಮದ ನಿರ್ವಹಣೆ ಮಾಡಿದರು . ಉಪನ್ಯಾಸಕ ಭರತ್ ಕುಮಾರ್ , ಅಜ್ಮತ್, ಶೋಭಾ, ಸಚಿನ್, ಯಶ್ವಂತ್, ಬಡ್ತಿ ಮುಖ್ಯ ಶಿಕ್ಷಕರಾದ ದಿವಾಕರ್ ನಾಯ್ಕ್, ಶಿಬಿರಾರ್ಥಿಗಳು ಮತ್ತು ಗ್ರಾಮಸ್ಥರು ಹಾಜರಾಗಿದ್ದರು.ವರದಿ: ಮಧುರಾಮ್, ಸೊರಬ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















