ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಚಂದ್ರಗುತ್ತಿ ಸಮೀಪದ ನ್ಯಾರ್ಶಿ ತಿರುವಿನಲ್ಲಿ ಬಹಳಷ್ಟು ಅಪಘಾತಗಳು ಸಂಭವಿಸುತ್ತಿರುವುದನ್ನು ಕಂಡು ಸಾರ್ವಜನಿಕರು ಅಪಘಾತ ವಲಯದಲ್ಲಿ ರಸ್ತೆ ತಿರುವು ಅಪಾಯವಿರುವ ಸೂಚನೆಯ ನಾಮಫಲಕವನ್ನು ಮಂಗಳವಾರದಂದು ಆಳವಡಿಸಿದ್ದಾರೆ.
ಈ ತಿರುವಿನಲ್ಲಿ ಬಹಳಷ್ಟು ಅಪಘಾತಗಳು ಸಂಭವಿಸುತ್ತಿದ್ದು ಪ್ರಯಾಣಿಕರು ಮುನ್ನೆಚ್ಚರಿಕೆಯಿಂದ ಚಲಿಸಬೇಕು ಹಾಗೂ ಅಪಘಾತಗಳನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಗ್ರಾಮಸ್ಥರೆಲ್ಲ ಸೇರಿ ಅಫಘಾತ ವಲಯದ ಸೂಚನಾ ಫಲಕವನ್ನು ಅಳವಡಿಸಿದ್ದೇವೆ ಎಂದಿದ್ದಾರೆ.
ಸರ್ಕಾರವು ಎಲ್ಲೆಲ್ಲಿ ಅಪಾಯಕಾರಿ ರಸ್ತೆ ತಿರುವುಗಳಿವೆ ಅದನ್ನು ಗಮನಿಸಿ ಮುನ್ನೆಚ್ಚರಿಕಾ ಕ್ರಮ ವಹಿಸಿ ತಿರುವುಗಳಲ್ಲಿ ಹಂಪ್ ಗಳು ಹಾಗೂ ಸೂಚನಾ ಫಲಕಗಳನ್ನು ಆಳವಡಿಸಬೇಕು ಎಂದು ಗ್ರಾಮಸ್ಥರ ಪರವಾಗಿ ಚನ್ನಪಟ್ಟಣ ಗ್ರಾಮದ ಪ್ರಶಾಂತ್ ನಾಯ್ಕ್ ಒತ್ತಾಯಿಸಿದರು.
Also read: ಧಗಧಗ ಉರಿದ ಬಸ್ | ಇಬ್ಬರು ಸಜೀವ ದಹನ, 12 ಪ್ರಯಾಣಿಕರಿಗೆ ಗಂಭೀರ ಗಾಯ
ಗ್ರಾಪಂ ಅಧ್ಯಕ್ಷ ಧನಂಜಯ ಡಿ. ನಾಯ್ಕ್, ಪ್ರಮುಖರಾದ ಸುಧಾಕರ್ ಗೌಡ್ರು, ಗೌಸ್ ಮದೀನ್, ಪ್ರಕಾಶ್ ಎನ್. ನಾಯ್ಕ್, ಪ್ರಶಾಂತ್ ನಾಯ್ಕ್, ಗುರು ಬರದವಳ್ಳಿ, ಪ್ರಭು ಸಂಭಾಪುರ, ಬಾಲು, ಅಜಯ್ ಸೇರಿದಂತೆ ಸುತ್ತಮುತ್ತಲಿನ ಊರ ಗ್ರಾಮಸ್ಥರಿದ್ದರು.
ಈ ಒಂದು ಸೂಚನಾ ಫಲಕ ಆಳವಡಿಸಲು ಚಂದ್ರಗುತ್ತಿ ಆರಕ್ಷಕ ಠಾಣೆಯ ಸಂತೋಷ ಬಿ.ಕೆ, ಮಂಜುನಾಥ ದೈವಜ್ಞ ಸಹಕರಿಸಿದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post