ಕಲ್ಪ ಮೀಡಿಯಾ ಹೌಸ್ | ಸೊರಬ |
ನೈಸರ್ಗಿಕವಾಗಿ ಸಿಗುವ ಶುದ್ಧವಾದ ನೀರನ್ನು ಮಿತವಾಗಿ ಬಳಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಕೆ. ಬಾಲಚಂದ್ರಪ್ಪ ಹೇಳಿದರು.
ಪುರಸಭೆಯ ವತಿಯಿಂದ ಹೊಸಪೇಟೆ ಬಡಾವಣೆಯ ಜಲ ಸುಖೀಕರಣ ಘಟಕದ ಆವರಣದಲ್ಲಿ ಮಹಿಳೆಯರಿಗಾಗಿ ನೀರು ನೀರಿಗಾಗಿ ಮಹಿಳೆಯರು ಎನ್ನುವ ಮಹಿಳೆಯರಿಗಾಗಿ ಏರ್ಪಡಿಸಿದ್ದ ಜಲ ದೀಪಾವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ನೀರನ್ನು ಅವಶ್ಯಕತೆಗೆ ತಕ್ಕಂತೆ ಬಳಸಬೇಕು. ನೀರು ಅನಾವಶ್ಯಕವಾಗಿ ಹರಿದುಹೋಗದಂತೆ ತಡೆಯಬೇಕು. ಮುಂಬರುವ ದಿನಗಳಲ್ಲಿ ಜಲಕ್ಷಾಮ ಕಾಡಲಿದ್ದು, ಮಿತವಾದ ನೀರು ಬಳಕೆಯಿಂದ ಭೂಮಿಯ ಅಂತರ್ಜಲ ಮಟ್ಟ ಏರಿಕೆಯಾಗಿ ಮುಂದಿನ ಪೀಳಿಗೆಗೆ ಶುದ್ಧವಾದ ನೀರು ಸಿಗುತ್ತದೆ ಎಂದರು.
ಪುರಸಭಾ ಮಾಚಿ ಅಧ್ಯಕ್ಷ ಎಂ,ಡಿ, ಉಮೇಶ್ ಮಾತನಾಡಿ ಮಹಿಳೆಯರಿಗಾಗಿ ನೀರು, ನೀರಿಗಾಗಿ ಮಹಿಳೆಯರು ಎಂಬ ಘೋಷವಾಕ್ಯದೊಂದಿಗೆ ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಪಪಂ ವ್ಯಾಪ್ತಿಯ ಮಹಿಳೆಯರು ಇದರಲ್ಲಿ ಭಾಗವಹಿಸಿದ್ದಾರೆ. ಇವರಿಗೆ ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಹಳೆ ಜೋಳದ ಗುಡ್ಡೆ ಗ್ರಾಮದ ದಂಗಾವತಿ ನದಿ ಬಳಿಯ ಜಾಕ್‌ವೆಲ್‌ನಲ್ಲಿ ಕಚ್ಚಾ ನೀರು ಎತ್ತುವುದು, ಅಲ್ಲಿಂದ ಸಂಸ್ಕರಣಾ ಘಟಕಕ್ಕೆ ಕರೆತಂದು ನೀರನ್ನು ಶುದ್ಧೀಕರಿಸುವ ಎಲ್ಲ ಪ್ರಕ್ರಿಯೆಗಳನ್ನು ಪ್ರಾಯೋಗಿಕವಾಗಿ ಇಲ್ಲಿ ತೋರಿಸಿ ನಂತರ ನೀರಿನ ಮಹತ್ವ, ಅದರ ಉಳಿವಿನ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಪ್ರೇಮಾಟೋಕಪ್ಪಾ, ಲಕ್ಷ್ಮಿ ನಾರಾಯಣ್ , ಕಂದಾಯ ನಿರೀಕ್ಷಕ ಶ್ರೀನಿವಾಸ್, ಅಭಿಯಂತರ ಹರೀಶ್, ಪರಿಸರ ಅಭಿಯಂತರ ಚಂದನ್, ಕಂದಾಯ ವಿಭಾಗದ ವಿನಾಯಕ್, ಪುರಸಭಾ ವ್ಯಾಪ್ತಿಯ ಮಹಿಳೆಯರು ಇದ್ದರು.
(ವರದಿ: ಮಧುರಾಮ್, ಸೊರಬ)


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















